ಮುಖ ನೋಡಿಯೇ ನಿಮ್ಮ ಬಗ್ಗೆ ಎಲ್ಲವನ್ನೂ ಹೇಳಬಹುದು. ಆದರೆ ಯಾವತ್ತಾದರೂ ಯೋಚಿಸಿದ್ದೀರಾ ನಿಮ್ಮ ಕೂದಲು ಸಹ ನಿಮ್ಮ ಬಗ್ಗೆ ಹೇಳುತ್ತದೆ ಎಂದು. ಹೌದು ವಿವಿಧ ಶೈಲಿಯ, ರೀತಿಯ ಕೂದಲುಗಳು ನಿಮ್ಮ ಸ್ವಭಾವದ ಬಗ್ಗೆ ತುಂಬಾನೆ ಹೇಳುತ್ತದೆಯಂತೆ.
ಎರಡು ಭಾಗವಾದ ಕೂದಲು : ಯಾರ ಕೂದಲು ಎರಡು ಮುಖ ಮಾಡಿರುತ್ತದೋ ಅವರ ಆರೋಗ್ಯ ಕೆಟ್ಟದಾಗಿರುತ್ತದೆ. ಇಂತಹ ಜನ ಹೆಚ್ಚಾಗಿ ಕನ್ಫ್ಯೂಸ್ ಆಗಿರುತ್ತಾರೆ. ಇದರಿಂದ ಅವರಿಗೆ ಬೇಗನೆ ಸಫಲತೆ ಸಹ ಸಿಗುವುದಿಲ್ಲ.
ಕಪ್ಪು ಕೂದಲು : ಯಾವ ವ್ಯಕ್ತಿಯ ಕೂದಲು ಕಪ್ಪಾಗಿರುತ್ತದೆ ಅವರು ಮಾನಸಿಕ ರೂಪದಲ್ಲಿ ಸಂಪೂರ್ಣ ಸ್ವಾಸ್ಥ್ಯ ಹೊಂದಿರುತ್ತಾರೆ. ತಮ್ಮ ಕೆಲಸವನ್ನು ಪರಿಶ್ರಮದಿಂದ ಮಾಡುವ ಹಾಗೂ ನಂಬಿಕೆಗೆ ಅರ್ಹ ವ್ಯಕ್ತಿಗಳಾಗಿರುತ್ತಾರೆ. ಇಂತಹ ಜನ ಉತ್ತಮ ಜೀವನ ನಡೆಸಲು ಬಯಸುತ್ತಾರೆ.
ತೆಳುವಾದ ಕೂದಲು : ಒಂದು ವೇಳೆ ನಿಮ್ಮ ಕೂದಲು ತೆಳುವಾಗಿದ್ದರೆ ನಿಮ್ಮ ಸ್ವಭಾವ ಉತ್ತಮವಾಗಿರುತ್ತದೆ. ಇಂತಹ ಜನ ಹೆಚ್ಚಾಗಿ ಉದಾರಿಗಳಾಗಿರುತ್ತಾರೆ. ಅಷ್ಟೇ ಅಲ್ಲಾ ಪ್ರೇಮಿ, ದಯಾಳು, ಸಂಕೋಚ ಸ್ವಭಾವದ ಹಾಗೂ ಸಂವೇದನಾಶೀಲರಾಗಿರುತ್ತಾರೆ.
ರೇಷ್ಮೆಯಂತಹ ಕೂದಲು : ಹೆಚ್ಚಾಗಿ ಎಲ್ಲಾ ಹುಡುಗಿಯರು ತಮ್ಮ ಕೂದಲು ರೇಷ್ಮೆಯಂತೆ ನುಣುಪಾಗಿ ಆಕರ್ಷಕವಾಗಿರಬೇಕೆಂದು ಇಷ್ಟಪಡುತ್ತಾರೆ. ಇಂತಹ ಕೂದಲು ಪಡೆದಿರುವ ಮಹಿಳೆಯರು ಸೌಭಾಗ್ಯಶಾಲಿಯಾಗಿರುತ್ತಾರೆ, ಶ್ರೀಮಂತ ಹಾಗೂ ಉತ್ತಮ ಆರೋಗ್ಯ ಹೊಂದಿರುವವರಾಗಿರುತ್ತಾರೆ.
ದಪ್ಪ ಕೂದಲು : ದಪ್ಪ ಕೂದಲು ಹೊಂದಿರುವ ವ್ಯಕ್ತಿಗಳು ವಿದ್ಯಾವಂತರಾಗಿರುತ್ತಾರೆ. ಇಂತಹ ಜನರು ದೊಡ್ಡ ಅಧಿಕಾರಿ ಅಥವಾ ವ್ಯಾಪಾರಿಯಾಗುತ್ತಾರೆ. ಯಾವ ವ್ಯಕ್ತಿಯ ತಲೆಯಲ್ಲಿ ಕೂದಲು ಕಡಿಮೆ ಇರುತ್ತದೆ ಅವರು ಒಂದಾ ಶ್ರೀಮಂತರಾಗಿರುತ್ತಾರೆ ಅಥವಾ ತುಂಬಾ ಬಡವರಾಗಿರುತ್ತಾರೆ.