ಪಿಂಕ್ ಬಣ್ಣದ ಕ್ಯಾನ್ವಸ್ ಶೂ
ಗ್ಲಾಮರಸ್ ಡ್ರೆಸ್ ಜೊತೆ ತೆಳ್ಳಗಿನ ಬಿಳಿ ಬೆಲ್ಟ್ ಹಾಕಿಕೊಂಡು ಅದಕ್ಕೆ ಪಿಂಕ್ ಕ್ಯಾನ್ವಸ್ ಶೂ ಹಾಕಿ ದಾರಿಯಲ್ಲಿ ನಡೆದರೆ ನಿಮ್ಮ ಲುಕ್‌ಗೆ ಇನ್ನಷ್ಟು ಮೆರುಗು ಸಿಗುತ್ತದೆ. ಈ ಲುಕ್‌ನ್ನು ನೀವು ಅಲಿಯಾ ಭಟ್‌ನಲ್ಲಿ ಕಾಣಬಹುದು.
ಟ್ರೆಂಡಿ ವೈಟ್ ಶೂ
ನಿಮಗೆ ಸಿಂಪಲ್ ಆಗಿ ಬಿಳಿ ಅಥವಾ ಗ್ರೇ ಬಣ್ಣದ ಶೂ ಧರಿಸುವುದು ಇಷ್ಟವಿದ್ದರೆ, ಕಂಗನಾ ರಾವತ್‌ನ ಲುಕನ್ನು ಫಾಲೋ ಮಾಡಿ. ಗ್ರೇ ಸ್ಲೀವ್‌ಲೆಸ್ ಟಾಪ್ ಹಾಗೂ 3/4ಪ್ಯಾಂಟ್ ಜೊತೆ ಬಿಳಿ, ಗ್ರೇ ಬಣ್ಣದ ಕ್ಯಾನ್ವಸ್ ಸೂಟ್ ಆಗುತ್ತದೆ.
ಕ್ಯಾಶುವಲ್ ಕ್ಯಾನ್ವಸ್
ಕ್ಯಾಶುವಲ್ ಆಗಿ ಕಾಣಬೇಕಾ ಹಾಗಾದ್ರೆ ಅನುಷ್ಕಾ ಶರ್ಮಾ ಲುಕ್ ನಿಮ್ಮದಾಗಿಸಿ, ಬಿಳಿ ಟೀ ಶರ್ಟ್ ಹಾಗೂ ಬ್ಲಾಕ್ ಪ್ಯಾಂಟ್ ಅದರ ಜೊತೆ ನೀಲಿ ಬಿಳಿ ಬಣ್ಣದ ಕ್ಯಾನ್ವಸ್ ಧರಿಸಿ ಎಲ್ಲಾ ಕಾಲಕ್ಕೂ ಸೂಟ್ ಆಗುತ್ತೆ ಈ ಲುಕ್.
ಕ್ಯಾನ್ವಸ್ ಪೀಪ್ ಶೂ
ಕ್ಯಾನ್ವಸ್ ಪೀಪ್ ಶೂ ನಿಮಗಿಷ್ಟವಾದರೆ ಜಾಕ್ವೆಲಿನ್ ಫೆರ್ನಾಂಡಿಸ್ ಡ್ರೆಸ್ಸಿಂಗ್ ಸ್ಟೈಲ್ ಒಮ್ಮೆ ನೋಡಿ. ಬ್ಲ್ಯಾಕ್ ಮಿನಿ ಡ್ರೆಸ್ ಜೊತೆ ಸ್ಪೀವ್‌ಲೆಸ್ ಬ್ಲ್ಯಾಕ್ ಜಾಕೇಟ್ ಹಾಕಿ ತಲೆಗೆ ಬೇಸ್‌ಬಾಲ್ ಕ್ಯಾಪ್ ಹಾಕಿ ರೆಡ್ ಕ್ಯಾನ್ವಸ್ ಪೀಪ್ ಶೂ ಹಾಕಿ ಈ ಲುಕ್ ನಿಮ್ಮದಾಗಿಸಿ.