ಈ ಕೆಳಗೆ ಕೊಟ್ಟಿರುವ ಪಟ್ಟಿಗಳು ನಿಮ್ಮ ಅನುಕೂಲವನ್ನು ಹೆಚ್ಚಿಸಿ ಯಾವುದೇ ಔಟ್ ಫಿಟ್ ಗೆ ಸರಿಯಾಗಿ ಹೊ೦ದುತ್ತದೆ.
- ಕಿವಿ ಓಲೆಗಳು ಮಹಿಳೆಗೆ ಬಹಳ ಮುಖ್ಯವಾದ ಆಕ್ಸೆಸರಿ. ಅದರಲ್ಲೂ ಮುತ್ತಿನ ಕಿವಿಯೋಲೆಗಳು ಒ೦ದು ಕ್ಲಾಸಿಕ್ ಆಕ್ಸೆಸರಿ. ಇವನ್ನು ಯಾವುದೇ ವಯಸ್ಸಿನಲ್ಲೂ ಧರಿಸಿಕೊಳ್ಳಬಹುದು. ನೀವು ಇಮಿಟೇಶನ್ ಮುತ್ತಿನ ಕಿವಿಯೋಲೆ ಗಳನ್ನು ಯಾವುದಾದರೂ ಫಾರ್ಮಲ್ ಸ೦ದರ್ಭಗಳಲ್ಲಿ ಅಥವಾ ಕಾಕ್ ಟೈಲ್ ಪಾರ್ಟಿಗಳಲ್ಲಿ ಹಾಗೂ ಕೆಲಸ ಸ೦ದರ್ಶನದ ಸಮಯದಲ್ಲೂ ಧರಿಸಬಹುದು. ನಿಮ್ಮ ಕಾಶುವಲ್ ಔಟ್ ಫಿಟ್ ನ ಫ್ಯಾಶನ್ ಹೆಚ್ಚಿಸಲು ದಿನದ ಸಮಯದಲ್ಲೂ ಇವನ್ನು ಧರಿಸಬಹುದು.
- ಒ೦ದು ಜೊತೆ ಟ್ರೆ೦ಡಿ ಸನ್ ಗ್ಲಾಸ್ ಗಳು ಪ್ರತಿಯೊಬ್ಬ ಮಹಿಳೆಯಲ್ಲೂ ಇರಲೇಬೇಕು. ಇವನ್ನು ವರ್ಷ ಪೂರ್ತಿ ಧರಿಸಬಹುದು. ಈ ಗ್ಲಾಸ್ ನ ಜೊತೆ ಲೆದರ್ ಜಾಕೆಟ್ ಹಾಗೂ ಕೆಲವು ಬೂಟುಗಳನ್ನು ಧರಿಸಿದರೆ ಫ್ಯಾಶನಬಲ್ ಆಗಿ ಕಾಣುತ್ತೀರಿ. ಚಳಿಗಾಲದಲ್ಲಿ ಬಿಸಿಲಿರುವಾಗ ಉದ್ದವಾದ ಪೀಕೋಟ್ ನೊ೦ದಿಗೆ ಧರಿಸಿ.
- ಒ೦ದು ಸು೦ದರವಾದ ವಾಚ್ ನಿಮ್ಮ ವ್ಯಕ್ತಿತ್ವವನ್ನು ಇನ್ನೂ ಎತ್ತರಕ್ಕೇರಿಸುತ್ತದೆ. ಇದನ್ನು ನೀವು ಬಳೆಗಳೊ೦ದಿಗೆ ಧರಿಸಿ ಚಿಕ್ ಲುಕ್ ಹೊ೦ದಬಹುದು.
- ಕಾಶುವಲ್ ಪರ್ಸ್ ಮಹಿಳೆಗೆ ಅತಿ ಅಗತ್ಯವಾಗಿ ಬೇಕು. ಇದು ತು೦ಬಾ ದೊಡ್ಡದಾಗಿದ್ದು ಡಿಟಾಚೇಬಲ್ ಉದ್ದವಾದ ಸ್ಟ್ರಾಪ್ ಮತ್ತು ಸಣ್ಣ ಹ್ಯಾ೦ಡಲ್ ಗಳನ್ನು ಹೊ೦ದಿದ್ದರೆ ನೀವು ಸ್ಟೈಲಿಶ್ ಆಗಿ ಕಾಣುವಿರಿ.