ನಿಮ್ಮ ವಾರ್ಡ್ ರೋಬ್‌ನ ಅತ್ಯಮೂಲ್ಯ ಫ್ಯಾಷನ್ ಧಿರಿಸಾಗಿರುವ ಸೂಟ್‌ಗಳ ಆರೈಕೆ ಮಾಡುವುದು ಹೇಗೆ ಎಂಬ ಅರಿವು ಇರುವುದು ಅಗತ್ಯ. ಸೂಟ್ ಅನ್ನು ಚೆನ್ನಾಗಿ ಇಟ್ಟುಕೊಳ್ಳಲು ಅನುಸರಿಸಬೇಕಾದ ಕೆಲ ಕ್ರಮಗಳನ್ನು ಇಲ್ಲಿ ಕೊಡಲಾಗಿದೆ.
ಸರಿಯಾಗಿ ನೇತು ಹಾಕಿ: ನಿಮ್ಮ ಸೂಟನ್ನು ಸರಿಯಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ನೇತು ಹಾಕಿ. ಇದು ಸೂಟಿನ ಆಕಾರವನ್ನು ಅದರಲ್ಲೂ ವಿಶೇಷವಾಗಿ ಭುಜದ ಆಕಾರ ಸರಿಯಾಗಿ ಉಳಿಯಲು ನೆರವಾಗುತ್ತದೆ. ತೆರೆದ ಪ್ರದೇಶದಲ್ಲಿ ಅಗಲವಾದ ಮರದ ಹ್ಯಾಂಗರ್ ಬಳಸಿ ಸೂಟ್ ನೇತುಹಾಕಿ. ನಿಮ್ಮ ವಾರ್ಡ್‌ರೋಬ್‌ನೊಳಗೆ ಇರಿಸುತ್ತೀರಾದರೇ, ಇತರ ಬಟ್ಟೆಗಳು ಮತ್ತು ಸೂಟ್ ನಡುವೆ ಸಾಕಷ್ಟು ಅತರ ಇರುವಂತೆ ನೋಡಿಕೊಳ್ಳಿ.
ಡ್ರೈ ಕ್ಲೀನ್ ಮಾಡಬೇಡಿ: ಆರು ತಿಂಗಳಿಗೆ ಮೊದಲು ನಿಮ್ಮ ಸೂಟನ್ನು ಡ್ರೈ ಕ್ಲೀನ್ ಮಾಡುವುದು ಸರಿಯಲ್ಲ. ಆಗಿಂದಾಗ್ಗೆ ಡ್ರೈ ಕ್ಲೀನಿಂಗ್ ಮಾಡಿಸುವುದರಿಂದ, ಆ ಪ್ರಕ್ರಿಯೆಯಲ್ಲಿ ಬಳಸುವ ರಾಸಾಯನಿಕಗಳಿಂದಾಗಿ ಬಟ್ಟೆಗೆ ಹಾನಿಯಾಗುತ್ತದೆ. ಅದರ ಬದಲಾಗಿ ಬ್ರಶ್ ಮೂಲಕ ಸೂಟ್ ಮೇಲಿರುವ ಧೂಳು ಅಥವಾ ಕಲೆಗಳನ್ನು ತೆಗೆಯುವುದು ಉತ್ತಮ.
ಸ್ಟೀಮ್ ಇಸ್ತ್ರಿ: ಸೂಟ್ ಇಸ್ತ್ರಿ ಮಾಡುವಾಗ ಸ್ಟೀಮ್ ಐರನ್ ಬಳಸುವುದು ಸೂಕ್ತ. ಆದಷ್ಟು ನಿಯಮಿತವಾಗಿ ಇಸ್ತ್ರಿ ಮಾಡುವುದರಿಂದ ಸೂಟ್‌ನ ಫೈಬರ್‌ಗಳು ತೆರೆದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಬಟ್ಟೆಯನ್ನು ಕಲೆ ರಹಿತವಾಗಿ ಇಡುವುದು ಸಾಧ್ಯವಾಗುತ್ತದೆ.
ಗಾರ್ಮೆಂಟ್ ಚೀಲದೊಳಗೆ ಇಡಿ : ಗಾಳಿ ಸರಿಯಾಗಿ ಆಡುವ ಉಡುಪಿನ ಚೀಲವನ್ನು ಆಯ್ಕೆ ಮಾಡಿಕೊಂಡು, ಸೂಟ್ ಅದರೊಳಗೆ ಸುರಕ್ಷಿತವಾಗಿ ಇಡಿ. ಇದರಿಂದ ನಿಮ್ಮ ಸೂಟ್ ಸರಿಯಾದ ಆಕಾರ ಮತ್ತು ಸುಸ್ಥಿತಿಯಲ್ಲಿ ಇರುತ್ತದೆ.
ಈ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ನೀವು ಬಯಸಿದಾಗ ಧರಿಸಲು ಸ್ಟೈಲಿಷ್ ಸೂಟ್‌ಗಳು ಸದಾ ಹೊಸದರಂತೆ ನಿಮ್ಮ ವಾರ್ಡ್ ರೋಬ್ ನಲ್ಲಿ ಕಂಗೊಳಿಸುತ್ತಿರುತ್ತವೆ.