ಲೈಫ್ ಸ್ಟೈಲ್

ಕಾಲೇಜು ಬೆಡಗಿಯರಿಗೆ ಸೂಟ್‌ ಆಗುವ ಫ್ಯಾಶನ್‌ ಟ್ರೆಂಡ್‌


ಸ್ಫೋರ್ಟಿ ಲುಕ್‌:
ಸೀಳಿರುವ ಜೀನ್ಸ್‌ ಅಥವಾ ನೇರ ಪ್ಯಾಂಟ್‌ ಜೊತೆಗೆ ಪ್ರಿಂಟೆಡ್‌ ಸ್ವೀಟ್‌ ಶರ್ಟ್ ಅಥವಾ ಓವರ್‌ ಸೈಕ್‌ನ ಜೆರ್ಸಿ ಹಾಕಿಕೊಂಡ್ರೆ ಈ ಹವಾಮಾನಕ್ಕೆ ತುಂಬಾ ಸೂಟ್‌ ಆಗಿರುತ್ತೆ.  ಅಲ್ಲದೆ ಸ್ಫೋರ್ಟ್ಸ್‌ ಲುಕನ್ನು ನೀಡುತ್ತದೆ. ಅದರ ಜೊತೆ ಕಲರ್‌ಫುಲ್‌ ವಾಚ್‌ ಹಾಕಿಕೊಳ್ಳಿ.ಬೋಹೀಮಿಯನ್ ಬೇಬ್ : ತಲೆಯಿಂದ ಕಾಲಿನವರೆಗೆ ಬೋಹೀಮಿಯನ್ ಅವತಾರ ನಿಮ್ಮದಾಗಿಸಿ ಅದಕ್ಕಾಗಿ ತಲೆಗೆ ಹೆಡ್‌ ಚೈನ್‌  ಹಾಕಿಕೊಂಡು ಲೂಸ್‌ ಟಾಪ್‌ ಹಾಕಿ. ಇದಕ್ಕೆ ನೀವು ಟ್ರೈಬಲ್‌ ಪ್ರಿಂಟನ್ನೂ ಆಯ್ಕೆ ಮಾಡಬಹುದು. ಆ ಲೂಸ್‌ ಟಾಪ್‌ಗೆ ಲೆಗ್ಗಿಂಗ್ಸ್‌ ಅಥವಾ  ಯೋಗ ಪ್ಯಾಂಟ್‌ ಕೂಡಾ ಧರಿಸಬಹುದು.  ಈ ಉಡುಪಿಗೆ ಪಾದದ ಗಂಟಿನವರೆಗಿನ ಶೂ ಧರಿಸಿದರೆ ಇನ್ನೂ ಫ್ಯಾಶನ್‌ ಆಗಿ ಕಾಣುತ್ತದೆ.

90ರ ಫ್ಯಾಶನ್‌: 90ರ ದಶಕದ ಫ್ಯಾಶನ್‌ ಮತ್ತೆ ಮತ್ತೆ ಬರುತ್ತಿರುತ್ತದೆ.  ಗಾಢ ಬಣ್ಣದ ಕ್ರಾಪ್‌ ಟಾಪ್‌, ಬೆಲ್‌ ಪ್ಯಾಂಟ್‌ ಧರಿಸಿ ನೀವು ಮತ್ತೆ 90ರ ದಶಕದ ಹಿರೋಯಿನ್‌ ತರಾ ಕಾಣಿಸಬಹುದು.

ಕ್ರಾಪ್‌ ಟಾಪ್:  ಕ್ರಾಪ್‌ ಟಾಪ್‌ ಎಲ್ಲಾ ರೀತಿಯ ಪ್ಯಾಂಟ್‌ ಹಾಗೂ ಸ್ಕರ್ಟ್‌‌‌ಗೆ ಸೂಟ್‌ ಆಗುತ್ತೆ.  ಸ್ಕೇಟರ್‌ ಸ್ಕರ್ಟ್ ಹಾಗೂ ಶಾರ್ಟ್ಸ್‌‌ಗೂ ಸೂಟ್‌ ಆಗುತ್ತೆ.  ಇತ್ತೀಚಿನ ದಿನಗಳಲ್ಲಿ ಕ್ರಾಪ್‌ ಟಾಪ್‌ಗಳದ್ದೇ ಕಾರುಬಾರು. ಹಾಗಾಗಿ ಕ್ಯಾಂಪಸ್‌ನಲ್ಲೂ ಕ್ರಾಪ್‌ ಟಾಪ್‌ ಧೂಳೆಬ್ಬಿಸುದರಲ್ಲಿ ಡೌಟೇ ಇಲ್ಲ.