ಕ್ರೀಡಾ ಸುದ್ದಿ

ಸಿನಿಮಾದಲ್ಲಿ ಕ್ರಿಕೆಟ್‌ ದೇವರ ನಟನೆ

ಹೌದು, ಈಗಾಗಲೇ ಹಲವಾರು ಜಾಹೀರಾತುಗಳಲ್ಲಿ ನಟನೆ ಮಾಡಿರುವ ಕ್ರಿಕೆಟ್‌ ದೇವರು ಸಚಿನ್‌ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಪಾತ್ರ ನಿರ್ವಹಣೆಗೆ ಸಜ್ಜಾಗಿದ್ದಾರೆ. ಲಂಡನ್‌ ಮೂಲದ ಖ್ಯಾತ ನಿರ್ದೇಶಕ ಜೇಮ್ಸ್ ಎರಿಕ್ಸನ್ ನಿರ್ದೇಶನದ ‘200 ನಾಟೌಟ್‌’ ಚಿತ್ರದಲ್ಲಿ ಸಚಿನ್ ನಟಿಸಲಿದ್ದಾರೆ.

ಈ ಚಿತ್ರ ಸಚಿನ್‌ ತೆಂಡೂಲ್ಕರ್‌ ಅವರ ಬೆರಗುಗೊಳಿಸುವ ಕ್ರಿಕೆಟ್‌ ಬದುಕು ಆಧಾರಿತವಾಗಿದ್ದು, ಕ್ರಿಕೆಟ್‌ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.