ಹೊಸ ಸುದ್ದಿ

ಸಂಗಾತಿಯ ಕಣ್ಣಿನ ಬಣ್ಣ ನೋಡಿ ಅವರ ವ್ಯಕ್ತಿತ್ವದ ಬಗ್ಗೆ ಅರಿಯಿರಿ

ಇದೇ ಕಣ್ಣುಗಳ ಮೂಲಕ ಎದುರಿಗಿದ್ದವರು ಎಂತವರು ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಯೆಸ್‌ ನಿಮಗೂ ನಿಮ್ಮ ಸಂಗಾತಿಯ ಗುಣ ಹೇಗಿದೆ ಎಂಬುದನ್ನು ತಿಳಿಯಬೇಕೆಂದಿದ್ದರೆ ಅವರ ಕಣ್ಣುಗಳನ್ನು ನೋಡಿ… ಆ ಕಣ್ಣಿನ ಬಣ್ಣಗಳು ನಿಮ್ಮ ಸಂಗಾತಿಯ ಗುಣವನ್ನು ನಿಮ್ಮೆದುರು ತೆರೆದಿಡುತ್ತದೆ.

ಗ್ರೇ ಕಣ್ಣುಗಳು :ಇಂತಹ ಕಣ್ಣುಗಳನ್ನು ಹೊಂದಿರುವವರನ್ನು ಕಡಿಮೆ ಆಕ್ರಮಣ ಶೀಲ ವ್ಯಕ್ತಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲಾ ಜೆಂಟಲ್‌ ಹಾಗೂ ಬುದ್ಧಿವಂತ ಸಹ ಆಗಿರುತ್ತಾರೆ. ಸೆನ್ಸಿಟಿವಿಟಿ ಎಂಬುದು ಅವರ ಆಂತರಿಕ ಶಕ್ತಿಯಾಗಿರುತ್ತದೆ. ಇವರು ಹೆಚ್ಚಾಗಿ ಕಾರ್ಯಗಳನ್ನು ಮಾಡುವ ಬದಾಲಾಗಿ ಹೆಚ್ಚು ಯೋಚನಾ ಮಗ್ನರಾಗಿರುತ್ತಾರೆ.

ಹೇಝೆಲ್‌ ಐಸ್‌ : ಲೈಟ್‌ ಬ್ರೌನ್‌ ಅಥವಾ ಗೋಲ್ಡ್‌ ಬಣ್ಣದಿಂದ ಕೂಡಿರುವ ಕಣ್ಣುಗಳಿವು. ಇವರು ಉತ್ಕೃಷ್ಟ ವ್ಯಕ್ತಿತ್ವ ಹೊಂದಿದ ವ್ಯಕ್ತಿಯಾಗಿರುತ್ತಾರೆ. ಇವರು ಮೋಜು ಪ್ರಿಯರು, ಸ್ವತಂತ್ರ ವ್ಯಕ್ತಿತ್ವ ಹೊಂದಿರುವ ಧೀರರಾಗಿರುತ್ತಾರೆ. ಅಷ್ಟೇ ಅಲ್ಲದೇ ಸ್ವಲ್ಪ ರೊಮ್ಯಾಂಟಿಕ್‌ ವ್ಯಕ್ತಿತ್ವ ಸಹ ಹೊಂದಿರುತ್ತಾರೆ. ಏಲ್ಲಾ ವಿಷಯದಲ್ಲೂ ಎಕ್ಸ್‌ಪೆರಿಮೆಂಟ್‌ ಮಾಡಲು ಬಯಸುವ ಇವರು ಚಾಲೆಂಜ್‌ ಪ್ರಿಯರು ಸಹ ಆಗಿರುತ್ತಾರೆ.

ಡಾರ್ಕ್‌ ಬ್ರೌನ್‌ ಕಣ್ಣುಗಳು : ಇವರು ನಂಬಿಕೆಗೆ ಅರ್ಹ ವ್ಯಕ್ತಿಗಳು. ಆಕರ್ಷಕ, ಕಾನ್ಫಿಡೆಂಟ್‌ ಹಾಗೂ ಮುದ್ದಾದ ವ್ಯಕ್ತಿತ್ವ ಇವರದ್ದು. ಡಾರ್ಕ್‌ ಬ್ರೌನ್‌ ಕಣ್ಣುಗಳನ್ನು ಹೊಂದಿರುವವರು ಎಲ್ಲಾ ಜನರಿಂದ ಪ್ರೀತಿಯನ್ನು ಪಡೆಯುವ ನೀಡುವ ವ್ಯಕ್ತಿಯಾಗಿರುತ್ತಾರೆ. ಇವರು ಪ್ರಕೃತಿ ಸೌಂದರ್ಯ ಪ್ರಿಯರು, ಸ್ಪಿರಿಚುಲ್‌ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಬ್ಲ್ಯಾಕ್‌  ಕಣ್ಣು : ಇವರು ಜವಾಬ್ಧಾರಿಯುತ ಹಾಗೂ ಭಾವೋದ್ರಿಕ್ತ ವ್ಯಕ್ತಿಗಳಾಗಿರುತ್ತಾರೆ. ಡಾರ್ಕ್‌ ಬ್ಲ್ಯಾಕ್‌ ಕಣ್ಣು ಹೊಂದಿರುವವರು ಅತ್ಯಂತ ಆಶಾವಾದಿಗಳಾಗಿರುತ್ತಾರೆ. ಇವರು ತಮ್ಮ ಒಳ್ಳೆಯತನವನ್ನು ತೋರಿಸಲು ಸದಾ ತಮ್ಮ ತುದಿಕಾಲಲ್ಲಿ ನಿಂತಿರುತ್ತಾರೆ. ಅಲ್ಲದೇ ಸೀಕ್ರೆಟಿವ್‌ ವ್ಯಕ್ತಿತ್ವ ಇವರದ್ದಾಗಿದ್ದು ತಮ್ಮ ಬಗ್ಗೆ ಇತರರಿಗೆ ಹೆಚ್ಚು ಹೇಳಿಕೊಳ್ಳಲು ಇವರು ಇಷ್ಟಪಡುವುದಿಲ್ಲ.