ಹೊಸ ಸುದ್ದಿ

ಇದೀಗ 5ಜಿ ಇಂಟರ್‌ನೆಟ್‌ ಸೇವೆ ಒದಗಿಸಲಿದೆ ಗೂಗಲ್‌

ಇನ್ನು ಮುಂದೆ ನೀವು 5ಜಿ ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಸೌಲಭ್ಯ ಪಡೆದುಕೊಳ್ಳಬಹುದು. ಈ 5ಜಿ ಇಂಟರ್‌ನೆಟ್‌ ಸ್ಪೀಡ್‌ ಸಾಧಾರಣ ಇಂಟರ್‌ನೆಟ್‌ಗಿಂತ 40 ಪಟ್ಟು ಹೆಚ್ಚು ಇರಲಿದೆ ಎಂದು ಗೂಗಲ್‌ ತಿಳಿಸಿದೆ.

ಒಂದು ಆಂಗ್ಲ ದಿನಪತ್ರಿಕೆಯ ಪ್ರಕಾರ ಗೂಗಲ್‌ ಇದಕ್ಕಾಗಿ ಡ್ರೋನ್‌ ನ ಪರೀಕ್ಷೆ ಸಹ ನಡೆಸಿದ್ದಾರೆ. ಈ ದೊಡ್ಡ ಪ್ರಾಜೆಕ್ಟ್‌ಗೆ ‘ಸ್ಕೈ ಬೆಂಡರ್’ ಎಂಬ ಹೆಸರು ಸಹ ಇಡಲಾಗಿದೆ ಎಂದು ತಿಳಿದು ಬಂದಿದೆ.

ಈ ಸೇವೆ ನೀಡಲು ಗೂಗಲ್‌ ಸೌರ ಶಕ್ತಿಯಿಂದ ನಡೆಯುವ ಡ್ರೋನ್‌ನ ಸಹಾಯ ಸಹ ಪಡೆಯಲಿದೆ.