ಹೊಸ ಸುದ್ದಿ

ಈ ಟ್ರಿಕ್ಸ್‌ ಉಪಯೋಗಿಸಿ ವೈಫೈ ಪಾಸ್‌ವರ್ಡ್‌ ಪತ್ತೆ ಹಚ್ಚಿ

ಒಂದು ವೇಳೆ ನೀವು ನಿಮ್ಮ ವೈಫೈ ಪಾಸ್‌ವರ್ಡ್‌ ಮರೆತ್ತಿದ್ದರೆ ಅದನ್ನು ಮತ್ತೆ ಪತ್ತೆ ಹಚ್ಚುವ ಸುಲಭ ವಿಧಾನ ನಮ್ಮ ಬಳಿ ಇದೆ. ಇದಕ್ಕಾಗಿ ನೀವು ಕೇವಲ ಒಂದು ಆ್ಯಪ್‌ನ ಸಹಾಯ ಪಡೆದುಕೊಳ್ಳಬೇಕು. ಸೋ ನೀವು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ವೈಫೈ ರಿಕವರಿ ಹೆಸರಿನ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು. ಅದಕ್ಕಾಗಿ ನಿಮ್ಮ ಸ್ಮಾರ್ಟ್‌ ಫೋನ್‌ ರೂಟೆಡ್‌ ಆಗಿರಬೇಕು.

ವೈಫೈ ರಿಕವರಿ ಆ್ಯಪ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ನಂತರ ಅದಕ್ಕೆ ನೀವು ಸೂಪರ್‌ ಯೂಸರ್‌ ಆಕ್ಸೆಸ್‌ ಕೊಡಿ. ಇದರಿಂದ ಅದು ತನ್ನ ಕೆಲಸ ಮಾಡಲು ಆರಂಭಿಸುತ್ತದೆ. ನೀವು ನಿಮ್ಮ ಫೋನ್‌ನಲ್ಲಿ ಎಷ್ಟು ವೈಫೈ ನೆಟ್‌ವರ್ಕ್‌ ಬಳಕೆ ಮಾಡುತ್ತೀರಿ ಆ ಲಿಸ್ಟ್‌ ಸ್ಕ್ರೀನ್ ಮೇಲೆ ಬರುತ್ತದೆ. ಇದರಲ್ಲಿ ನಿಮಗೆ ಎಲ್ಲಾ ನೆಟ್‌ವರ್ಕ್‌ ಪಾಸ್‌ವರ್ಡ್‌ ಜೊತೆ ಕಾಣಸಿಗುತ್ತದೆ.

ನಿಮ್ಮ ಮೊಬೈಲ್‌ನಲ್ಲಿ ವೈಫೈ ಪಾಸ್‌ವರ್ಡ್‌ಗಳ ದೊಡ್ಡ ಪಟ್ಟಿಯೇ ಬಂದರೆ ನೀವು ನಿಮ್ಮ ವೈಫೈ ಹೆಸರು ಹಾಕಿ ಸಹ ಪಾಸ್‌ವರ್ಡ್‌ ಕಂಡುಹಿಡಿಯಬಹುದು. ಒಂದು ವೇಳೆ ನೀವು ಇದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್‌ ಮಾಡಿಟ್ಟರೆ ಮುಂದಿ ಬರುವ ಎಲ್ಲಾ ಪ್ರಾಬ್ಲಂ ಸಹ  ದೂರವಾಗಬಹುದು.

ಇಷ್ಟೆಲ್ಲಾ ಮಾಡಿದ ಮೇಲೂ ಯಾವುದೇ ವಿಧಾನ ನಿಮ್ಮ ಕೆಲಸಕ್ಕೆ ಬಾರದಿದ್ದರೆ ರಾವುಟರ್‌ ರೀಸೆಟ್‌ ಮಾಡಿ. ಇದರಿಂದ ನಿಮ್ಮ ರಾವುಟರ್‌ ಫ್ಯಾಕ್ಟರ್‌ ರೀಸೆಟ್‌ ಆಗುತ್ತದೆ. ಈಗ ನೀವು ಅದರಲ್ಲಿ ಹೊಸ ಪಾಸ್‌ವರ್ಡ್‌ ಹಾಕಿ ನಿಮ್ಮ ಬ್ರಾಡ್‌ಬ್ಯಾಂಡ್‌ ಸೆಟ್‌ಅಪ್‌ ಮಾಡಬಹುದು.