ಆದರೆ ಅದೊಂದು ಫೇಕ್ ಅಕೌಂಟ್ ಎಂದು ಕಂಡುಹಿಡಿಯುವುದು ಹೇಗೆ ಎಂಬುದನ್ನು ಹೀಗೆ ತಿಳಿದುಕೊಳ್ಳಿ….
1. ಫೇಕ್ ಐಡಿ ಎಂದು ಕಂಡುಹಿಡಿಯುವ ಸುಲಭ ವಿಧಾನ ಎಂದರೆ ಫೋಟೊಗಳು. ಪ್ರೊಫೈಲ್‌ನಲ್ಲಿರುವ ಪೋಟೋಗಳಿಗಾಗಿ ನೋಡಿ. ಪೂರ್ಣವಾದ ಪ್ರೊಫೈಲ್‌ನಲ್ಲಿ ಕೇವಲ ಒಂದೇ ಒಂದು ಫೋಟೋ ಕಂಡುಬಂದಲ್ಲಿ ಆ ಖಾತೆ ಫೇಕ್ ಆಗಿದೆ ಎಂದರ್ಥ.
2. ಫೇಕ್ ಅಕೌಂಟ್‌ಗಳ ದೊಡ್ಡ ಗುರುತು ಎಂದರೆ ಅವರು ತುಂಬಾ ಸಮಯದವರೆಗೆ ಯಾವುದೇ ಅಪ್‌ಡೇಟ್ ಮಾಡಿರುವುದಿಲ್ಲ. ಸ್ಟೇಟಸ್ ಅಪ್‌ಡೇಟ್‌ಗಳಿಗಾಗಿ, ವಾಲ್ ಪೋಸ್ಟ್ ಮತ್ತು ಕಾಮೆಂಟ್‌ಗಳಿಗಾಗಿ ಯಾವುದೂ ಇಲ್ಲ ಎಂದಾದರೆ ಅದೊಂದು ಫೇಕ್ ಅಕೌಂಟ್.
3. ಇದಾದ ಮೇಲೆ ಅವರ ಚಟುವಟಿಕೆಗಳತ್ತ ಗಮನ ಕೊಡಿ. ಬಳಕೆದಾರರು ನಿಮ್ಮ ಸ್ನೇಹಿತರನ್ನೆ ಅವರ ಫ್ರೆಂಡ್ ಲಿಸ್ಟ್‌ನಲ್ಲಿ ಆ್ಯಡ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲಾ ಅವರು ಯಾವುದೇ ಫೇಸ್‌ಬುಕ್ ಪೇಜ್ ಅಥವಾ ಗ್ರೂಪ್‌ಗೆ ಜಾಯಿನ್ ಆಗಿರುವುದಿಲ್ಲ.
4. ಫೇಕ್ ಅಕೌಂಟ್ ಕಂಡುಹಿಡಿಯಲು ಅವರ ಫ್ರೆಂಡ್ ಲಿಸ್ಟ್ ಸಹಾಯ ಮಾಡುತ್ತದೆ. ಅದರಲ್ಲಿ ವಿರುದ್ಧ ಲಿಂಗದ ಖಾತೆಗಳು ಹೆಚ್ಚಾಗಿ ಕಂಡುಬಂದಲ್ಲಿ, ಈ ಖಾತೆ ನಕಲಿ ಎಂದು ಅರ್ಥ.
5. ಇದಾದ ಮೇಲೆ ಅಬೌಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಲ್ಲಿನ ಮಾಹಿತಿಯನ್ನು ಗಮನಿಸಿ. ಅದರಲ್ಲಿ ಶಾಲೆಯ ಹೆಸರು, ಕೆಲಸ ಮಾಡುವ ಕಚೇರಿ ಮಾಹಿತಿ ಇರದಿದ್ದಲ್ಲಿ ಇದು ಸುಳ್ಳು ಖಾತೆ ಎಂದು ಪರಿಗಣಿಸಲಾಗುತ್ತದೆ.
6. ಹುಟ್ಟಿದ ದಿನಾಂಕವನ್ನು ಗಮನಿಸಿ. ಪೇಕ್ ಖಾತೆಗಳಲ್ಲಿ ಹುಟ್ಟಿದ ದಿನಾಂಕ 1-1-1990/1996 ಅಥವಾ 31-12-1990/1996 ಈ ರೀತಿ ಇರುತ್ತದೆ. ಯಾಕೆಂದರೆ ಇದೊಂದು ವಿಶೇಷವಾದ ದಿನವಾಗಿರುತ್ತದೆ. ಆದುದರಿಂದ ಇಂತಹ ಡೇಟ್‌ಗಳನ್ನೆ ಅವರು ತಮ್ಮ ಜನ್ಮ ದಿನಾಂಕವಾಗಿ ಸೂಚಿಸುತ್ತಾರೆ.