ಹೊಸ ಸುದ್ದಿ

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸ್ಮಾರ್ಟ್‌ ಟಿಪ್ಸ್‌

ಜೆಸ್ಚರ್‌ ಬೋರ್ಡ್‌ : ಜೆಸ್ಚರ್‌ ಬೋರ್ಡ್‌ 3ನೇ ಪಾರ್ಟಿ ಆ್ಯಪ್ಸ್‌ ಇದನ್ನು ಹೆಚ್ಚಾಗಿ ಸ್ಮಾರ್ಟ್‌ಫೋನ್‌ನಲ್ಲಿ ಟೈಪಿಂಗ್‌ ಹೆಚ್ಚು ಮಾಡುವವರಿಗಾಗಿ ಡಿಸೈನ್‌ ಮಾಡಲಾಗಿದೆ. ಗೂಗಲ್‌ ಪ್ಲೇ ಮೂಲಕ swift key ಮತ್ತು swype ನಂತಹ ಕೀ ಬೋರ್ಡ್‌ ಆ್ಯಪ್‌ ಡೌನ್‌ಲೋಡ್‌ ಮಾಡಬಹುದು.

ಫೈಂಡ್‌ ಮೈ ಫೋನ್‌ ಆ್ಯಪ್‌ : ನಿಮ್ಮ ಹೊಸ ಆ್ಯಂಡ್ರಾಯ್ಡ್‌ ಫೋನ್‌ನ ಜವಾಬ್ದಾರಿ ಈ ಆ್ಯಪ್‌ಗೆ ನೀಡಲಾಗುತ್ತದೆ. ಫೈಂಡ್‌ ಮೈ ಫೋನ್‌ ಆ್ಯಪ್‌  ಇದೊಂದು ಟ್ರ್ಯಾಕಿಂಗ್‌ ಆ್ಯಪ್‌ ಆಗಿದೆ. ಇದರಿಂದ ಕಳೆದುಹೋದ ಮೊಬೈಲ್‌ ಪಡೆದುಕೊಳ್ಳಬಹುದು. ಈ ಆ್ಯಪ್‌ ಡೌನ್‌ಲೋಡ್‌ ಮಾಡಿದ ಬಳಿಕ ಪಿಸಿಗೆ ಸಿಂಕ್ರೋನೈಸ್‌ ಮಾಡಲಾಗುತ್ತದೆ. ಒಂದು ಸಲ ನಿಮ್ಮ ಕಂಪ್ಯೂಟರ್‌ಗೆ ಕನೆಕ್ಟ್‌ ಆದರೆ ಮತ್ತೆ ನಿಮ್ಮ ಫೋನ್‌ನ ಎಲ್ಲಾ ಮಾಹಿತಿಯನ್ನು ಅದು ನಿಮ್ಮ ಕಂಪ್ಯೂಟರ್‌ಗೆ ರವಾನಿಸುತ್ತದೆ.

ಗೂಗಲ್‌ ಮ್ಯಾಪ್‌ : ಗೂಗಲ್‌ ಮ್ಯಾಪ್‌ ಯಾವ ರೀತಿ ಉಪಯೋಗ ಮಾಡಬೇಕು ಎಂಬುದಕ್ಕೆ ಆ ಆ್ಯಪ್‌ನಲ್ಲಿಯೇ ಎಲ್ಲಾ ರೀತಿಯ ಟ್ರಿಕ್ಸ್‌, ಸಲಹೆ ಇರುತ್ತದೆ. ಅದಕ್ಕಾಗಿ ನಿಮಗೆ ಗೂಗಲ್ ಆ್ಯಪ್ಸ್‌ ಸೆಟ್ಟಿಂಗ್‌ಗೆ ಹೋಗಬೇಕು. ನಂತರ ಟಿಪ್ಸ್‌ ಮತ್ತು ಟ್ರಿಕ್ಸ್‌ ಆಪ್ಷನ್‌ ಮೇಲೆ ಕ್ಲಿಕ್‌ ಮಾಡಬೇಕು.

ಅಟೊಮ್ಯಾಟಿಕ್‌ ಅಪ್‌ಡೇಟ್ : ನಿಮ್ಮ ಮೊಬೈಲ್‌ನ ಎಲ್ಲಾ ಆ್ಯಪ್‌ ಸರಿಯಾಗಿ ವರ್ಕ್‌ ಮಾಡಬೇಕಾದರೆ ಆ್ಯಪ್‌ಗಳು ಸರಿಯಾಗಿ ಅಪ್‌ಡೇಟ್‌ ಆಗುವುದು ಮುಖ್ಯ. ಆದುದರಿಂದ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಅಟೊಮ್ಯಾಟಿಕ್‌ ಅಪ್‌ಡೇಟ್ ಆಪ್ಷನ್‌ ಇರುತ್ತದೆ ಅದನ್ನು ಬಳಕೆ ಮಾಡಿ.

ಗೂಗಲ್‌ ನೌ : ಯಾರ ಮೊಬೈಲ್‌ನಲ್ಲಿ ಆಂಡ್ರಾಯ್ಡ್‌ನ ಲೇಟೆಸ್ಟ್‌ ವರ್ಶನ್‌ ಇರುತ್ತದೋ ಅವರು ಗೂಗಲ್‌ ನೌ ಬಳಕೆ ಮಾಡಬಹುದು. ಇದು ಬಳಕೆದಾರರ ವಾಯ್ಸ್‌ ಕಮಾಂಡ್‌ನಿಂದ ಕಾರ್ಯ ನಿರ್ವಹಿಸುತ್ತದೆ.