ದೊಡ್ಡ ಸುದ್ದಿ

ಅಂಗನವಾಡಿ ಮಕ್ಕಳ ಶಿಕ್ಷಣಕ್ಕೆ ಭಿಕ್ಷುಕ ಕೊಟ್ಟ ೧೦ ಬಂಗಾರದ ಉಂಗುರ!

ಅಹಮಾದಬಾದ್:  ಕೀಮ್‌ಜೀ ಭಾಯಿ ದಿನ ನಿತ್ಯ ದೇವಸ್ಥಾನಗಳ ಮುಂಭಾಗದಲ್ಲಿ ನಿಂತು ಭಿಕ್ಷೆ ಬೇಡಿಕೊಂಡು ಬದುಕು ಕಟ್ಟುವ ವ್ಯಕ್ತಿ. ಆದರೆ ಆತನನ್ನು ಭಿಕ್ಷುಕ ಎನ್ನುವ ಕೆಟಗರಿಗೆ ತಲ್ಲುವ ಮೊದಲು ಒಂಚೂರು ನಿಂತು ಬಿಡಿ. ಯಾಕ್ ಅಂದ್ರೆ ಮೆಸಾನಾ ಎನ್ನುವ ನಗರದಲ್ಲಿರುವ ಅಂಗನವಾಡಿಯ ಪುಟಾಣಿ ಮಕ್ಕಳ ಶಿಕ್ಷಣಕ್ಕೆ ಬರೋಬರಿ ೧೦ ಬಂಗಾರ ಉಂಗುರಗಳನ್ನು ನೀಡಿ ಮಹಾನ್ ದಾನಿ ಎನ್ನಿಸಿಕೊಂಡ ಕತೆ ಇಲ್ಲಿದೆ.
ಕೀಮ್‌ಜೀ ಭಾಯಿ ಸಾಕಷ್ಟು ವರ್ಷಗಳಿಂದ ಮೆಸಾನಾ ನಗರದ ದೇವಳಗಳಲ್ಲಿ ಭಿಕ್ಷೆ ಬೇಡುತ್ತಾ ಕಾಲ ಕಳೆಯುತ್ತಿದ್ದ. ಆದರೆ ಈತ ಭಿಕ್ಷೆ ಬೇಡುತ್ತಿದ್ದ ನಗರದಲ್ಲಿ ಒಂದು ಅಂಗನವಾಡಿ ಇತ್ತು. ಪ್ರತಿ ವರ್ಷ ಕೀಮ್‌ಜೀ ಈ ಅಂಗನವಾಡಿಗೆ ತನ್ನ ಕೈಯಲ್ಲಿ ಸಾಧ್ಯವಿದಷ್ಟೂ ದಾನ ಮಾಡಿಕೊಂಡು ಬರುತ್ತಿದ್ದರು.

ಈ ಬಾರಿಯಂತೂ ಅಂಗನವಾಡಿಗೆ ಬರುತ್ತಿದ್ದ ತೀರಾ ಬಡ ಕುಟುಂಬದ ೧೦ ಪುಟಾಣಿಗಳಿಗೆ ೧೦ ಸಣ್ಣ ಬಂಗಾರದ ಉಂಗುರಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಮಕ್ಕಳ ಶಿಕ್ಷಣ ಗಟ್ಟಿಯಾಗಲಿ ಎನ್ನುವ ಮನೋಭಾವನೆ ಕೀಮ್‌ಜೀದ್ದು .  ನಾವು ದಿನದ ಬದುಕು ಸಾಗಿಸುವುದೇ ದೊಡ್ಡ ಸಾಹಸ. ನಾವು ಕನಸ್ಸು ಮನಸ್ಸಿನಲ್ಲೂ ಬಂಗಾರದ ಉಂಗುರ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಪುಟಾಣಿಯ ಹೆತ್ತವರಲ್ಲಿ ಒಬ್ಬರಾದ ಕುಮುದು ಲೂವಾರಿಯಾ ಹೇಳಿಕೊಂಡಿದ್ದಾರೆ.
ಹೆಣ್ಣು ಮಕ್ಕಳು ಜಾಸ್ತಿ ಸಂಖ್ಯೆಯಲ್ಲಿ ಓದಬೇಕು. ಅವರು ತಮ್ಮ ಕಾಲ ಮೇಲೆ ನಿಂತು ಬದುಕು ಕಟ್ಟುವುದು ಇಂದಿನ ದಿನಗಳಲ್ಲಿ ಅತೀ ಅಗತ್ಯ. ಮೆಸಾನಾದ ಪರಿಸ್ಥಿತಿ ಉತ್ತಮವಾಗಿಲ್ಲ. ಇಲ್ಲಿಯ ಹುಡುಗರ ಸಮಾನಾಗಿ ಹುಡುಗಿಯರು ಬೆಳೆದು ಬಂದಿಲ್ಲ. ಈ ಕಾರಣದಿಂದ ಇಂತಹ ಕೆಲಸ ಮಾಡಿದೆ ಎಂದು ಕೀಮ್‌ಜೀ ಭಾಯಿ ಹೇಳಿಕೊಂಡಿದ್ದಾರೆ.
ಕೀಮ್ ಜೀ ಜುವೆಲ್ಲರಿ ಖರೀದಿ ಮಾಡಿದ ಅಂಗಡಿ ಮಾಲೀಕ ದೀಪಕ್ ಶಾ ಹೇಳುವಂತೆ ‘ ತುಂಬಾ ಪುಟ್ಟದಾದ ಉಂಗುರಗಳು. ಹುಡುಗಿಯರ ಮೂಗುತಿಗಿಂತ ಕೊಂಚ ದೊಡ್ಡದು. ೧೩ ಸಾವಿರ ರೂ. ಇದಕ್ಕೆ ವೆಚ್ಚ ತಗಲುತ್ತದೆ. ಕೀಮ್‌ಜೀ ಉದ್ದೇಶ ಅರಿತ ನಾನು ೩ ಸಾವಿರಡಿಸ್ಕೌಂಟ್ ಕೊಟ್ಟೆ ಎಂದು ಹೇಳಿಕೊಂಡಿದ್ದಾರೆ. ಕೀಮ್‌ಜೀ ಕಳೆದ ೧೩ ವರ್ಷಗಳಿಂದ ತಮ್ಮ ದಾನ ಧರ್ಮದ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಈಗಾಗಲೇ ಸರಿಸುಮಾರು ೮೦ ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿಗಳ ಪುಸ್ತಕ ಖರೀದಿ, ಯೂನಿಫಾರ್ಮ್, ಫೀಸ್ ಕಟ್ಟುವ ಕೆಲಸಕ್ಕೆ ಮುಗಿಸಿದ್ದಾರೆ. ವಿಶೇಷ ಚೇತನ ಮಕ್ಕಳ ಶಾಲೆ ದಿಶಾ ಡೇ ಸ್ಕೂಲ್ ಸೇರಿದಂತೆ ಸುತ್ತಮುತ್ತಲಿನ ಶಾಲೆಗಳಲ್ಲಿ ಕಲಿಯುತ್ತಿರುವ ೧೨ ವಿದ್ಯಾರ್ಥಿನಿಯರ ಶಿಕ್ಷಣ ವೆಚ್ಚವನ್ನು ಬರಿಸುತ್ತಿದ್ದಾರೆ.