ತಂತ್ರಜ್ಞಾನದ ಓಟದ ಮುಂದೆ ಮಾನವ ಸಂಪನ್ಮೂಲಗಳು ಸೈಡ್‌ಗೆ ಬಂದು ನಿಲ್ಲುತ್ತದೆ ಎನ್ನುವ ಮಾತುಗಳು ಪದೇ ಪದೇ ಫ್ರೂವ್ ಆಗುತ್ತಾ ಹೋಗುತ್ತಿದೆ. ಅಂರ್ತಜಾಲ ಲೋಕದಲ್ಲಿಯೇ ಗಟ್ಟಿ ಹೆಸರು ಮಾಡಿಕೊಂಡ ಯೂಹೂ ಕಂಪನಿ ೧೭೦೦ ಮಂದಿಯನ್ನು ಮನೆಗೆ ಕಳಿಸುವ ಯೋಚನೆಯೊಂದು ರೆಡಿ ಮಾಡುತ್ತಾ ಸಾಗುತ್ತಿದ್ದಂತೆ ಮತ್ತೊಂದೆಡೆ ವರ್ಲ್ಡ್ ಎಕಾನಾಮಿಕ್ ಫಾರಂ ವಿಭಿನ್ನವಾದ ವರದಿಯೊಂದನ್ನು ಸಿದ್ಧ ಮಾಡಿಕೊಂಡಿದೆ.
ಇದರ ಪ್ರಕಾರಣ ೨೦೨೦ರಲ್ಲಿ ಅಮೇರಿಕದಲ್ಲಿಯೇ ಬರೋಬರಿ ೫.೧ ಮಿಲಿಯ ಮಂದಿ ಕೆಲಸ ಕಳೆದುಕೊಳ್ಳುತ್ತಾರೆಯಂತೆ. ಇದು ಬರೀ ಅಮೆರಿಕದ ಮಾತಲ್ಲ ಈ ದೇಶವನ್ನು ನೆಚ್ಚಿಕೊಂಡಿರುವ ಎಲ್ಲ ದೇಶಗಳಿಗೂ ಇದರ ಭಯ ಇರಲೇಬೇಕು. ಅಂದಹಾಗೆ ಈ ಎಲ್ಲ ಕೆಲಸಗಳನ್ನು ಕಸಿದುಕೊಳ್ಳುವ ವ್ಯಕ್ತಿ ಯಾರು ಅಂತೀರಾ. ಖುದ್ದು ಮಾನವನೇ ಸಿದ್ಧಮಾಡಿಕೊಟ್ಟ ರೊಬೋಟ್ ಎನ್ನುವುದು ವಿಶೇಷ. ಮುಖ್ಯವಾಗಿ ಉತ್ಪಾದನಾ ಹಾಗೂ ನಿರ್ಮಾಣ ಕ್ಷೇತ್ರದಲ್ಲಿರುವ ಉದ್ಯೋಗಿಗಳು ಕೆಲಸ ಕೆಳೆದುಕೊಳ್ಳುವುದು ಗ್ಯಾರಂಟಿ ಎನ್ನುವ ಮಾಹಿತಿಯನ್ನು ಫಾರಂ ವರದಿ ಸಿದ್ಧಪಡಿಸಿದೆ.
pics: Reuters