ಸಾಫ್ಟ್‌ಡ್ರಿಂಕ್ಸ್ ಕುಡಿದರೇ ಏನೆಲ್ಲಾ ತೊಂದರೆಗಳು ಉಂಟಾಗುತ್ತದೆ ತಿಳಿಯಿರಿ…
- ಒಂದು ಕ್ಯಾನ್ ಸೋಡಾದಲ್ಲಿ 10 ಚಮಚದಷ್ಟು ಸಕ್ಕರೆ ಅಂಶ ಹೊಂದಿದೆ. ಈ ಸಕ್ಕರೆ ದ್ರವ ರೂಪದಲ್ಲಿರುತ್ತದೆ ಇದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿ ದೇಹದಲ್ಲಿ ಇನ್ಸುಲಿನ್ ರಿಯಾಕ್ಟ್ ಮಾಡುತ್ತದೆ.
- ಸೋಡಾದಲ್ಲಿ ಫೋಸ್ಪೋರಿಕ್ ಆ್ಯಸಿಡ್ ಇದೆ. ಇದು ದೇಹದ ಕ್ಯಾಲ್ಸಿಯಂ ಸೆಳೆಯುವ ಶಕ್ತಿಯನ್ನು ಕುಂದಿಸುತ್ತದೆ. ಇದರಿಂದ ಕ್ಯಾವಿಟಿ, ಮೂಳೆ ಮೃದುವಾಗುವುದು ಮೊದಲಾದ ತೊಂದರೆಗಳು ಉಂಟಾಗುತ್ತದೆ.
- ಡಯಟ್ ಸೋಡಾದಲ್ಲಿ ಸಕ್ಕರೆ ಬದಲಾಗಿ ಅಸ್ಪಾರ್ಟಾಮ್ ಬಳಕೆ ಮಾಡಲಾಗುತ್ತದೆ. ಇದು ಸಕ್ಕರೆಗಿಂತ ಹೆಚ್ಚು ಹಾನಿಕಾರಕವಾಗಿದೆ. ಇದರಿಂದ ಸುಮಾರು ನೂರಕ್ಕೂ ಹೆಚ್ಚು ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.
- ಹೆಚ್ಚಿನ ಸೋಡಾಗಳಲ್ಲಿ ಕೆಫೆನ್ ಅಂಶವಿದೆ. ಇದರಿಂದ ಕ್ಯಾನ್ಸರ್, ಎದೆ ಸಂಬಂಧಿ ರೋಗಗಳು ಕಾಣಿಸಿಕೊಳ್ಳಬಹುದು.
- ಸೋಡಾದಲ್ಲಿ ಉಪಯೋಗಿಸುವ ನೀರು ಯಾವುದೋ ನಲ್ಲಿಯ ನೀರಾಗಿರಲೂಬಹುದು. ಇದರಲ್ಲಿ ಕ್ಲೋರಿನ್, ಪ್ಲೋರೈಡ್‌ನಂತಹ ಕೆಮಿಕಲ್ ಸೇರಿರುತ್ತದೆ.
- ಸೋಡಾ ಕುಡಿಯುವ ಮಕ್ಕಳಲ್ಲಿ ಉಳಿದವರಿಗಿಂತ ಹೆಚ್ಚು ಬೊಜ್ಜು ಕಾಣಿಸಿಕೊಳ್ಳುತ್ತದೆ ಎಂದು ಇತ್ತೀಚಿಗಿನ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.
- ಇದರಲ್ಲಿರುವ ಸಕ್ಕರೆ, ಕೆಫೆನ್ ಮತ್ತು ಸೋಡಿಯಂ ಅಂಶದಿಂದಾಗಿ ದೇಹವು ಡಿಹೈಡ್ರೇಟ್ ಆಗುತ್ತದೆ.