ದೊಡ್ಡ ಸುದ್ದಿ

ಚಾ ಜತೆಯಲ್ಲಿ ಇಡ್ಲಿ ಚಟ್ನಿ ಪ್ಲೇಟ್‌ಗೆ ಬರೀ ೫ ರೂಪಾಯಿ ಮಾತ್ರ

ಆಂಧ್ರ ಪ್ರದೇಶದ ದಿಲೀಪ್ ಮಿನೇಜಸ್ ಐಟಿ ಕಂಪನಿಯಲ್ಲಿ ಉದ್ಯೋಗಿ ಅದರಲ್ಲೂ ಮುಖ್ಯವಾಗಿ ಬೈಕ್ ಮೇಲೆ ಕೂತು ರಾಜ್ಯಗಳನ್ನು ಸುತ್ತಾಟ ಮಾಡೋದು ಆತನಿಗೆ ಎಲ್ಲಿಲ್ಲದ ಖುಷಿ. ಇಂತಹ ಬೈಕ್ ರೈಡಿಂಗ್ ಸಮಯದಲ್ಲಿ ಆತವೊಂದು ಕತೆ ಹೇಳಿದ್ದಾನೆ. ಅದು ಬರೀ ಕತೆಯಲ್ಲ ದೇಶದ ಅತೀ ಕಡಿಮೆ ಬೆಲೆಯಲ್ಲಿ ಚಾ, ಇಡ್ಲಿ ಕೊಡುವ ಹೋಟೆಲ್ ಮಾಲೀಕರ ರಿಯಲ್ ಕತೆ.
ದಿಲೀಪ್ ಮಿನೇಜಸ್ ಹೇಳುವ ಕತೆ ಹೀಗೆ ಸಾಗುತ್ತದೆ. ನರಸಿಂಹ ಪಟ್ಟಣಂ ನಿಂದ ಲಾಂಬಾಸಿಂಗಿ ಕಡೆ ಪ್ರಯಾಣ ಬೆಳೆಸಿದೆ. ಮುಂಜಾನೆ ಹೊತ್ತು ಹೊಟ್ಟೆ ಸಖತ್ ತಾಳ ಹಾಕುತ್ತಿತ್ತು. ಆದರೆ ರಸ್ತೆ ಉದ್ದಕ್ಕೂ ಯಾವುದೇ ಹೋಟೆಲ್‌ಗಳು ಸಿಗುತ್ತಾ ಇರಲಿಲ್ಲ. ಇನ್ನಷ್ಟೂ ದೂರಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಣ್ಣು ಮುಂದೆ ಒಂದು ಪುಟ್ಟ ಗುಡಿಸಲು ಕಾಣಿಸಿಕೊಂಡಿತು. ಅಲ್ಲಿ ವಯಸ್ಸಾದ ಅಜ್ಜ ಹಾಗೂ ಅಜ್ಜಿ ಇದ್ದರು. ನಾನು ಬೈಕ್ ಓಡಿಸುವುದನ್ನು ನಿಲ್ಲಿಸಿದೆ. ಚಾ ಬೇಕು ಎಂದು ಕೇಳಿದೆ ಅವರ ಭಾಷೆಯಲ್ಲಿ ಏನೋ ಹೇಳಿದ್ರೂ ನನಗಂತೂ ಅರ್ಥವೇ ಆಗಿಲ್ಲ. ಕೊಂಚ ಸಮಯದಲ್ಲಿ ಚಾ ಸಿದ್ಧವಾಯಿತು. ತಂದು ನನ್ನ ಮುಂದೆ ಇಟ್ಟರು. ಬಳಿಕ ಚಾ ಜತೆಯಲ್ಲಿ ತಿನ್ನಲು ಇಡ್ಲಿ ಕೊಡಿ ಎಂದೇ ಅಜ್ಜಮ್ಮ ಗುಡಿಸಲ ಒಳಗೆ ಹೋಗಿ ನಾಲ್ಕು ಇಡ್ಲಿ ಜತೆಯಲ್ಲಿ ಚಟ್ನಿ ತಂದು ಕೊಟ್ಟರು.
ಖುಷಿಯಿಂದ ಚಾ ಹೀರುತ್ತಾ ಇಡ್ಲಿ ತಿಂದು ಮುಗಿಸಿದೆ. ಹೊರಟುವ ಹೊತ್ತಿನಲ್ಲಿ ಎಷ್ಟಾಯಿತು..? ಎಂದು ಪ್ರಶ್ನಿಸಿದೆ. ೫ ರೂಪಾಯಿ ಕೊಡಿ ಸಾಕು ಎಂದು ಬಿಟ್ಟರು ! ಅರೇ ಯಾಕೆ ಇಷ್ಟು ಕಡಿಮೆ ಎಂದು ಕೇಳಿದೆ. ಇಬ್ಬರು ಮುಗುಳುನಕ್ಕರು. ಮತ್ತೇ ಕೂಡ ಕೇಳಲು ಆರಂಭ ಮಾಡಿದೆ. ಉತ್ತರ ಕೊಡದೇ ಮುಗುಳು ನಕ್ಕರು. ಸುತ್ತಮುತ್ತ ಕಣ್ಣಾಡಿಸಿ ನೋಡಿದೆ. ನಿಜಕ್ಕೂ ಅದು ಹೋಟೆಲ್ ಆಗಿರಲಿಲ್ಲ. ಅವರು ತಮಗೆ ತಿನ್ನಲು ಸಿದ್ಧಪಡಿಸಿಕೊಂಡ ತಿಂಡಿಯಾಗಿತ್ತು. ನಾನು ಬೇಸರಗೊಂಡು ಪಾಕೆಟ್‌ನಿಂದ ಹೆಚ್ಚಿನ ಹಣವನ್ನು ಕೊಟ್ಟೆ ಅವರು ಸ್ವೀಕಾರ ಮಾಡಲೇ ಇಲ್ಲ. ಅವರನ್ನು ಪ್ರೀತಿಯಿಂದ ಆಲಂಗಿಸಿಕೊಂಡು ನಾನು ಮುಂದಿನ ದಾರಿ ನೋಡಿದೆ.

 

ಬೈಕ್‌ನಲ್ಲಿ ಓಡುತ್ತಾ ನಾನು ಮತ್ತೆ ಯೋಚನೆಗೆ ಇಳಿದೆ. ಈ ಅಜ್ಜ-ಅಜ್ಜಿಯಿಂದ ನಾನು ಕಲಿತು ಕೊಂಡ ಪಾಠವೇನು ಗೊತ್ತಾ ಎಂದು ನನ್ನನ್ನು ನಾನೇ ಪ್ರಶ್ನಿಸಿದೆ. ಮನಸ್ಸಿನ ಮೂಲೆಯಲ್ಲಿ ದಕ್ಕೊಂದು ಉತ್ತರ ಸಿಕ್ಕಿಕೊಂಡಿತು. ನೀವು ಏನ್ನಾನಾದರೂ ಕೊಡಲು ಮುಂದೆ ಸಾಗುವಾಗ ಅದನ್ನು ಪ್ರೀತಿಯಿಂದ, ಮನಸ್ಸು ಪೂರಕವಾಗಿ ನೀಡಬೇಕು ಎನ್ನುವುದನ್ನು ಕಲಿತು ಕೊಂಡೆ.