ದೊಡ್ಡ ಸುದ್ದಿ

ಭರ್ತಿ 444 ತೂಕದ ಮನುಷ್ಯ 6 ಎನರ್ಜಿ ಡ್ರಿಂಕ್‌ಗೆ ಸತ್ತ !

ಎಲ್ಲವೂ ಲಿಮಿಟ್‌ನಲ್ಲಿ ಇರಬೇಕು ಎನ್ನುವುದು ಹಿರಿಯರು ಹೇಳುತ್ತಿದ್ದ ಮಾತು ಈಗ ಸತ್ಯವಾಗಿದೆ. ಅದೇನಪ್ಪಾ ಅಂದರೆ ವಿಶ್ವದ ಅತೀ ತೂಕದ ವ್ಯಕ್ತಿ ಎಂದೇ ಬಿಂಬಿತ ಮೆಕ್ಸಿಕೋದ ಆಂಡ್ರಾಸ್ ಮೊರೆನೋ ಅವರಿಗೆ ಭರ್ತಿ 38 ವರ್ಷ. ಆದರೆ ಅವರ ವಯಸ್ಸಿಗೂ ಅವರ ದೇಹ ತೂಕಕ್ಕೂ ಸಂಬಂಧವೇ ಇಲ್ಲ.

ಆದರೂ ಅವರ ದೇಹ ತೂಕ ಜಾಸ್ತಿಯಾಗುತ್ತಾ ಹೋಯಿತು. ಆದರೆ ಪೊಲೀಸ್ ಇಲಾಖೆಯಲ್ಲಿ ದುಡಿಯುತ್ತಿದ್ದ ಕಾರಣ ಎನರ್ಜಿಯಂತೂ ಬೇಕಿತ್ತು. ಇದೇ ಕಾರಣಕ್ಕೆ ದಿನವೊಂದಕ್ಕೆ 6 ಎನರ್ಜಿ ಡ್ರಿಂಕ್‌ಗಳನ್ನು ಕುಡಿಯುತ್ತಾ ಹೋದ ಅಸಾಮಿಗೆ ವೈದ್ಯರು ಪದೇ ಪದೇ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಮಾತು ಕೇಳಬೇಕಲ್ಲ.

ಮತ್ತೆ ಎನರ್ಜಿ ಡ್ರಿಂಕ್ ಕುಡಿಯಲು ಶುರು ಮಾಡಿದರು. ದೇಹ ಅವರ ಡ್ರಿಂಕ್ ಎನರ್ಜಿಯನ್ನು ತೆಗೆದುಕೊಳ್ಳಲು ವಿಫಲವಾಯಿತು. ಆದರೂ 444 ದೇಹದ ತೂಕ ಇಳಿಸುವ ಪ್ರಯತ್ನವಂತೂ ಮಾಡಿ 317 ಕೆಜಿಗೆ ಬಂದಾಗ ಹೃದಯಾಘಾತದಿಂದ ಸಾವನ್ನಪ್ಪಿದರು.