ಆ ಹುಡುಗನಿಗೆ ಸಖತ್ ಸೆಲ್ಫಿ ಕ್ರೇಜ್. ಅದರಲ್ಲೂ ಸುಂದರಿ ಮಹಿಳಾ ಡಿಸಿಯನ್ನು ಕಂಡಾಕ್ಷಣ ಸೆಲ್ಫಿ ತೆಗೆಯಲೇಬೇಕು ಎಂದುಕೊಂಡು ಹೋದವನ ಕತೆಇಲ್ಲಿದೆ ಕೇಳಿ…
ಉತ್ತರ ಪ್ರದೇಶದ ಬುಲಂದಶಹರ್ ಜಿಲ್ಲಾಧಿಕಾರಿ ಚಂದ್ರಕಲಾ ಅವರೊಂದಿಗೆ ಸೆಲ್ಫಿ ಕ್ಕಿಕ್ಕಿಸಿಕೊಳ್ಳಲು ಹೋಗಿ ಫರದ್ ಅಹಮದ್ ಎನ್ನೋ ಯುವಕ ಜೈಲು ಪಾಲಾಗಿ ಬೇಲ್ ಮೇಲೆ ರಿಲೀಸ್ ಆಗಿದ್ದಾನೆ. ಸೋಮವಾರ ಜೈಲಿಗೆ ಹೋದ ಫರದ್ ಅಹಮದ್ ಸೋಮವಾರ ಬೇಲ್ ಮೇಲೆ ಹೊರ ಬಂದಿದ್ದಾನೆ.
ಚಂದ್ರಕಲಾ ಅವರು ಕಮಲ್‌ಪುರ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಜನರೊಂದಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಫರದ್ ಸೆಲ್ಫಿಗೆ ಯತ್ನಿಸಿದ್ದಾನೆ. ಹಲವು ಬಾರಿ ಎಚ್ಚರಿಸಿದರೂ ಫೋಟೋ ಕ್ಲಾರಿಟಿಗಾಗಿ ಚಂದ್ರಕಲಾ ಅವರ ಸಮೀಪಕ್ಕೆ ಬಂದು ಸತತವಾಗಿ ಸೆಲ್ಫಿ ಕ್ಲಿಕ್ಕಿಸಿದ್ದಾನೆ. ಇದರಿಂದ ಮೇಡಂ ಇರುಸು ಮುರುಸುಗೊಂಡಿದ್ದಾರೆ.
‘ಫೋನ್ ಕ್ಯಾಮೆರಾ ನಿಮ್ಮದಾಗಿರಬಹುದು…ಆದರೆ ಯಾರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತೀರೋ ಅವರ ಅನುಮತಿಯೂ ಬೇಕು’ ಎಂದು ಜಿಲ್ಲಾಧಿಕಾರಿ ಚಂದ್ರಕಲಾ ಗರಂ ಆಗಿದ್ದಾರೆ.
ಚಂದ್ರಕಲಾ ಬೇರಾರೂ ಅಲ್ಲ. 2014ರಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಗುತ್ತಿಗೆದಾರರನ್ನು ಹಿಗ್ಗಾಮುಗ್ಗಾ ಥಳಿಸಿ ಸುದ್ದಿಯಾದವರು.