ದೊಡ್ಡ ಸುದ್ದಿ

ಈ ಊರಿನಲ್ಲಂತೂ ಬಡ ರೈತರು ಮಾತ್ರ ಶ್ರೀಮಂತರು !

ಅತೀ ಸಣ್ಣ ಮಡಾವಗ್ ಹಳ್ಳಿಯಲ್ಲಿ ದುಡಿಯುವ ರೈತರು ಮಾತ್ರ ಶ್ರೀಮಂತರು. ಇದು ಸಣ್ಣ ಹಳ್ಳಿಯ ರೈತರು ಕಟ್ಟಿದ ಶ್ರೀಮಂತಕತೆಯ ಆರಂಭ.

ಸೇಬಿನ ಉತ್ಪಾದನೆಗೆ ದೇಶ ವಿದೇಶಗಳಲ್ಲೇ ಹೆಸರುವಾಸಿಯಾದ ಮಡಾವಗ್ ಗ್ರಾಮ ಇದೀಗ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸೇಬಿನ ವ್ಯಾಪಾರದ ಮೂಲಕ ಇಲ್ಲಿನ ರೈತರು ಕೈತುಂಬಾ ಹಣ ಸಂಪಾದಿಸುತ್ತಿದ್ದು, ಪ್ರತೀ ರೈತನ ಬಳಿಯೂ ದೊಡ್ಡ ಬಂಗಲೆ, ಐಷಾರಾಮಿ ಕಾರು ಹಾಗೂ ಇನ್ನಿತರ ಆಧೂನಿಕ ಸೌಲಭ್ಯಗಳಿವೆ.

ಮಡಾವಗ್ ಗ್ರಾಮ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವನ್ನಾಗಿಸುವಲ್ಲಿ ಚೈಂಡಿಯಾ ರಾಮ್ ಮೆಹ್ತಾ ಎಂಬ ರೈತನ ಪಾತ್ರ ಅತ್ಯಂತ ಮಹತ್ವದ್ದು. 1954ರಲ್ಲಿ ಕೊಟ್‌‌ಕಾಯಿ ಗ್ರಾಮದಿಂದ ಸೇಬಿನ ಬಳ್ಳಿ ತಂದು ತಮ್ಮ ತೋಟದಲ್ಲಿ ನೆಟ್ಟ ಮೆಹ್ತಾ, ಅಂದಿನಿಂದ ಹಿಂದುರುಗಿ ನೋಡಿದ್ದೇ ಇಲ್ಲ.

ದಿನಕಳೆದಂತೆ ಸೇಬಿನ ಉತ್ಪಾದನೆ ಹಾಗೂ ಮಾರಾಟದಲ್ಲಿ ಲಾಭಗಳಿಸಲು ಪ್ರಾರಂಭಿಸಿದ ಮೆಹ್ತಾ, ಗ್ರಾಮದ ಇತರ ರೈತರಿಗೂ ಸೇಬು ಬೆಳೆಯುವಂತೆ ಪ್ರೇರೆಪಿಸಿದರು. ಅದರಂತೆ ಮಡಾವಗ್ ಗ್ರಾಮದ ಪ್ರತೀ ರೈತನೂ ಸೇಬಿನ ಉತ್ಪಾದನೆಯಲ್ಲಿ ಏಕಸ್ವಾಮ್ಯ ಸಾಧಿಸಿದ್ದು, ಗ್ರಾಮ ರೈತರು ಇದೀಗ ವಾರ್ಷಿಕ 150 ಕೋಟಿಗೂ ಅಧಿಕ ಮೊತ್ತದ ವ್ಯಾಪಾರ ವಹಿವಾಟು ನಡೆಸುತ್ತಾರೆ.

ಮಡಾವಗ್ ಗ್ರಾಮದಲ್ಲಿ 2 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಬಹುತೇಕ ಜನರು ಸೇಬಿನ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಇಲ್ಲಿ ಬೆಳೆಯುವ ಸೇಬು ದೇಶ ವಿದೇಶಗಳಿಗೆ ರಫ್ತಾಗಿ ಇಲ್ಲಿನ ರೈತರು ಕೈತುಂಬ ಹಣ ಸಂಪಾದಿಸುತ್ತಿದ್ದಾರೆ. ಸದ್ಯ ಈ ಗ್ರಾಮ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದ್ದು, ಈ ಹಿಂದೆ ಗುಜರಾತ್‌‌ನ ಮಾಧವ್‌‌ಪುರ್‌ ಹೆಸರಲ್ಲಿ ಇದ್ದ ರೆಕಾರ್ಡ್‌ ಮುರಿದಿದೆ.