ಟಾಲಿವುಡ್ನಲ್ಲಿ ಬಹಳ ಬ್ಯುಸಿಯಾಗಿರುವ ನಟಿಗಳ ಪೈಕಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರು. ಆದರೆ ಬ್ಯುಸಿ ಶೆಡ್ಯುಲ್ ಮಧ್ಯೆಯೂ ರಕುಲ್ ತರಕಾರಿ ಮಾರ್ಕೆಟ್ಗೆ ಹೋಗಿ ತರಕಾರಿ ಮಾರಾಟ ಮಾಡಿದ್ದಾರೆ.
ರಕುಲ್ ನಟಿ, ನಿರೂಪಕಿ ಮಂಚು ಲಕ್ಷ್ಮಿ ಅವರ ಟಿವಿ ಶೋನಲ್ಲಿ ಪಾಲ್ಗೊಂಡಿದ್ದಾರೆ. ಮಂಚು ಲಕ್ಷ್ಮಿಯವರ ಕಾರ್ಯಕ್ರಮ ಸಾಮಾಜಿಕ ಕಾಳಜಿ ಇಟ್ಕೊಂಡು ಮಾಡುತ್ತಿರುವ ಕಾರ್ಯಕ್ರಮ. ಬಡ ಜನರ ಜೀವನದಲ್ಲಿ ಸುಧಾರಣೆ ತರುವ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮ.
ಅಂತೆಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ರಕುಲ್ ಕಾರ್ಯಕ್ರಮದ ಭಾಗವಾಗಿ ಹೈದರಬಾದ್ನ ಕೆಪಿಎಚ್ಬಿಯ ಮಾರುಕಟ್ಟೆಯೊಂದರಲ್ಲಿ ತರಕಾರಿ ಮಾರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.