ಕೋಸ್ಟಲ್ವುಡ್ ಅಂಗಳದಲ್ಲಿ ಇದೊಂದು ಭಯಂಕರವಾದ ಖುಷಿ ವಿಷ್ಯಾ. ಕರಾವಳಿಯ ಸಿನಿಮಾ ಇರಲಿ ರಂಗಭೂಮಿ ಇರಲಿ ಎರಡಲ್ಲೂ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಹಾಗೂ ದೇವದಾಸ್ ಕಾಪಿಕಾಡ್ ಇಬ್ಬರು ಬದ್ಧ ವೈರಿಗಳು ಎಂದೇ ಇಷ್ಟರ ವರೆಗೆ ಅವರ ಅಪ್ಪಟ ಅಭಿಮಾನಿಗಳು ತಿಳಿದುಕೊಂಡಿದ್ದರು.
ಆದರೆ ಒಂದು ಮೂಲದ ಪ್ರಕಾರ ಇವರಿಬ್ಬರ ವೃತ್ತಿಯಲ್ಲಿ ಏನೇ ಇದ್ದರೂ ಕೂಡ ವೃತ್ತಿಯಿಂದ ಹೊರಗಡೆ ಕೂಲಾಗಿ ಮಾತನಾಡುವ ಮಂದಿ ಎನ್ನುವ ಮಾತಿದೆ. ಇದೇ ಕಾರಣದಿಂದ ತುಳುವಿನಲ್ಲಿ ತೀರಾ ಇತ್ತೀಚೆಗೆ ಚಿತ್ರವೊಂದು ನೋಂದಣಿಯಾಗಿದೆ. ಅದರ ಹೆಸರು ದೇವದಾಸ್ ಹೆಡ್ಡಿಂಗ್ ಇಟ್ಟುಕೊಂಡು ದೀ ಲೇಝೀ ಸ್ಟಾರ್ ಟ್ಯಾಗ್ ಲೈನ್ ಇಟ್ಟುಕೊಂಡು ಚಿತ್ರವೊಂದು ಸ್ಕೆಚ್ ನಡೆಯುತ್ತಿದೆ.
ಇದರಲ್ಲಿ ದೇವದಾಸ್ಗೆ ಮುಖ್ಯ ಪಾತ್ರ ಸಿಗಲಿದೆ. ಆದರೆ ಈ ಆಫರ್ ದೇವದಾಸ್ ಕಾಪಿಕಾಡ್ ನಯವಾಗಿ ತಿರಸ್ಕಾರ ಮಾಡಿದ್ದಾರೆ ಎನ್ನುವ ಸುದ್ದಿ ಇದರ ಬಗಲಿಗೆ ಬಂದಿದೆ. ಇದೇ ಕಾರಣದಿಂದ ಕೊಡಿಯಾಲ್ಬೈಲ್ ಭೋಜರಾಜೆ ಎನ್ನುವ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.