ದೊಡ್ಡ ಸುದ್ದಿ

ಫೇಸ್ ಬುಕ್ ರಿಕ್ವೇಸ್ಟ್‌ನಿಂದ ಶೀಲವೇ ಹರಿದು ಹೋಯಿತು!

ಫೇಸ್‌‌ಬುಕ್‌‌ನಲ್ಲಿ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿ, ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ಯುವಕನನ್ನು ನಂಬಿದ ಯುವತಿಯೋರ್ವಳ ಮೇಲೆ ಯುವಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಆಗ್ರಾದ ಸುನೀಲ್ ಎಂಬ ಯುವಕ ಫರೂಖಾಬಾದ್‌‌‌ನ ಯುವತಿಯೋರ್ವಳ ಜೊತೆ ಫೆಸ್‌ಬುಕ್‌ನಲ್ಲಿ ಸ್ನೇಹ ಸಂಪಾದಿಸಿದ್ದಾನೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಸುನೀಲ್ ಯುವತಿಯನ್ನು ನೋಡಲು ಫರೂಖಾಬಾದ್‌‌ಗೆ ಬಂದಿದ್ದಾನೆ. ಈ ವೇಳೆ ಸುನೀಲ್‌‌‌ನನ್ನು ಭೇಟಿಯಾಗಲು ಆತ ಉಳಿದುಕೊಂಡಿದ್ದ ಹೊಟೇಲ್‌‌ಗೆ ಬಂದ ಯುವತಿಗೆ ಲೈಂಗಿಕ ಕ್ರಿಯೆಗೆ ಸುನೀಲ್ ಪೀಡಿಸಿದ್ದಾನೆ.

ಆದರೆ ಇದಕ್ಕೊಪ್ಪದ ಯುವತಿ ಹೊಟೇಲ್‌‌‌ನಿಂದ ಹೊರಡಲು ಮುಂದಾದಾಗ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಸುನೀಲ್, ಆಕೆಯ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಿ ಇದೀಗ ಬ್ಲ್ಯಾಕ್‌‌ಮೇಲ್ ಮಾಡುತ್ತಿದ್ದಾನೆ. ಅಲ್ಲದೇ ಮತ್ತೆ ತನ್ನನ್ನು ಭೇಟಿಯಾಗುವಂತೆ ಒತ್ತಾಯ ಮಾಡುತ್ತಿದ್ದಾನೆ ಎನ್ನಲಾಗಿದೆ.

ಸುನೀಲ್‌‌‌ನ ಕಾಟ ತಾಳಲಾರದೇ ಯುವತಿ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದು, ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಸುನೀಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು, ಸುನೀಲ್‌‌‌‌‌‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.