ದೊಡ್ಡ ಸುದ್ದಿ

ಯೋಧ ಹನುಮಂತಪ್ಪರನ್ನು ಬದುಕಿಸಿದವರು ಯಾರು ಗೊತ್ತಾ?

ದೇಶದ ಜನತೆ ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುನಾಡಿನ ಯೋಧ ಹನುಮಂತಪ್ಪರಿಗಾಗಿ ಪ್ರಾರ್ಥನೆಯಲ್ಲಿ ತಲ್ಲೀನವಾಗಿದೆ. ಸಿಯಾಚಿನ್ ಎನ್ನುವ ಹಿಮದ ನಡುವೆ ಅದರಲ್ಲೂ ೨೫ ಅಡಿ ಆಳದ ಹಿಮದಲ್ಲಿ ೬ ದಿನಗಳ ಕಾಲ ಉಸಿರು ಬಿಗಿ ಹಿಡಿದುಕೊಂಡು ಬದುಕು ಕಟ್ಟಿದ ಹನುಮಂತಪ್ಪರಿಗೆ ದೇಶದ ಎಲ್ಲ ಕಡೆಯಿಂದ ಪ್ರಾರ್ಥನೆಯ ಮೂಲಕ ಉಸಿರು ಗೆಲ್ಲುವ ಕೆಲಸ ನಡೆಯುತ್ತಿದೆ.

ಅಂದಹಾಗೆ ೬ ದಿನಗಳ ವರೆಗೆ ಹಿಮಶಿಖರದ ನಡುವೆ ಗಟ್ಟಿಯಾಗಿ ಉಸಿರು ಬಿಗಿ ಹಿಡಿದು ಕೂತ ಹನುಮಂತಪ್ಪರನ್ನು ರಕ್ಷಿಸಿದವರು ಬರೀ ಎರಡೇ ಮಂದಿ ಅಂತಾ ಯಾರಿಗಾದರೂ ಗೊತ್ತಾ. ಹೌದು. ಸೈನ್ಯದಲ್ಲಿರುವ ಡೋಟ್ ಹಾಗೂ ಮಿಶಾ ಎನ್ನುವ ಎರಡು ಶ್ವಾನಗಳು ಹನುಮಂತಪ್ಪ ಇರುವ ಜಾಗವನ್ನು ಪತ್ತೆ ಮಾಡಿತ್ತು ಎನ್ನುವುದು ಸೈನ್ಯ ಮೂಲದ ಮಾಹಿತಿ. 150 ಮಂದಿ ಸೈನ್ಯದ ಜತೆಯಲ್ಲಿ ಈ ಎರಡು ಶ್ವಾನಗಳು ಸಿಯಾಚಿನ್‌ನಲ್ಲಿ ಹುಡುಕಾಟ ನಡೆಸಿತ್ತು.