ತುಪ್ಪದಲ್ಲಿ ಕರಿದ ಚಿಕನ್ ಐಟಂಗಳು ಎಂದರೆ ಕರಾವಳಿಯ ಮಂದಿ ಬಾಯಿ ಚಪ್ಪರಿಸಿಕೊಂಡು ತಿಂದು ಮುಗಿಸುತ್ತಾರೆ. ಅದರಲ್ಲೂ ಕರಾವಳಿಯ ನಾನ್ವೆಜ್ ಐಟಂಗಳನ್ನು ಮಾಡುವ ರೆಸ್ಟೋರೆಂಟ್ಗಳಲ್ಲಿ ಚಿಕನ್ ಮಸಾಲೆಗೆ ತುಪ್ಪ ಸುರಿದು ಮಾಡುವ ಖಾದ್ಯಗಳಿಗೆ ಬಹಳಷ್ಟು ಬೇಡಿಕೆ ಇದೆ. ತುಪ್ಪವನ್ನು ಜಾಸ್ತಿಯಾಗಿ ಬಳಕೆ ಮಾಡುವ ಕರಾವಳಿಯ ಮಂದಿಗೆ ಕೋಳಿಯಲ್ಲಿರುವ ಉಷ್ಣತೆಯನ್ನು ತಡೆಯಲು ತುಪ್ಪ ಸಹಕಾರಿ ಎನ್ನುವ ನಂಬಿಕೆ ಇರುವುದರಿಂದ ಇಂತಹ ಐಟಂಗಳನ್ನು ಜಾಸ್ತಿ ಮಹತ್ವ ನೀಡುತ್ತಾರೆ ಎನ್ನೋದು ಕರಾವಳಿಯ ಜನ ಹೇಳುವ ಮಾತು. ಈ ಖಾದ್ಯಪದಾರ್ಥವು ಕ್ಯಾಲರಿ ಕುರಿತು ಕಾಳಜಿ ಇರುವ ವ್ಯಕ್ತಿಗಳಿಗೆ ಹೇಳಿಸಿದಂತಹುದಲ್ಲ. ತುಪ್ಪದ ಸ್ವಾದವು ಈ ಖಾದ್ಯಕ್ಕೆ ಒಂದು ವಿಶಿಷ್ಟವಾದ ಪರಿಮಳವನ್ನೂ ಹಾಗೂ ರುಚಿಯನ್ನೂ ನೀಡುತ್ತದೆ.
ಈ ಖಾದ್ಯ ತಯಾರಿಕೆಯ ಅವಧಿಯಲ್ಲಿ ನೀರನ್ನು ಸ್ವಲ್ಪವೂ ಕೂಡ ಬಳಸಲಾಗುವುದಿಲ್ಲ ಹಾಗೂ ಕೋಳಿ ಮಾಂಸವು ತುಪ್ಪದಿ೦ದ ಉತ್ಪನ್ನವಾದ ಹಬೆಯಿಂದ ಬೇಯುತ್ತದೆ. ಇದರ ತಯಾರಿಕೆ ಕೂಡ ಬಹಳ ಸುಲಭ ಹಾಗೂ ತಣ್ಣಗಿನ ಚಳಿಗಾಲದ ದಿನದ೦ದು ಬಡಿಸಲು ಯೋಗ್ಯವಾದ ತಿನಿಸು. ಪೋಷಕಾ೦ಶ ಇರೋದರಿಂದ ಅತ್ಯುನ್ನತ ಕ್ಯಾಲರಿಗಳ ಅ೦ಶವುಳ್ಳ ಆಹಾರವಸ್ತು. ಇದು ಸುಮಾರು ೬೦೦ ಕ್ಯಾಲರಿಗಳಷ್ಟು ಶಕ್ತಿಯನ್ನು ಪೂರೈಸಬಲ್ಲದು ಹಾಗೂ ಶರ್ಕರಪಿಷ್ಟಗಳಿಂದ ಇದು ಸಮೃದ್ಧವಾಗಿದೆ. ಅಂದಹಾಗೆ ಈ ಖಾದ್ಯದ ತಯಾರಿಕೆಯ ಮೊದಲು ಚಿಕನ್ ಅನ್ನು ಮೊಸರಿನಲ್ಲಿ ಅರ್ಧ ಘಂಟೆಯ ಕಾಲ ನೆನೆಸಿಡುವುದು ಅತೀ ಅಗತ್ಯ. ಯಾಕ್ ಅಂತೀರಾ ಇದರಿಂದ ಚಿಕನ್ ಮೃದುವಾಗಿಯೂ ಹಾಗೂ ಹೆಚ್ಚು ರುಚಿಕರವಾಗಿ ಇರುತ್ತದೆ ಎನ್ನುವುದು ಕರಾವಳಿಗರ ಮಾತು.
ಅಂದಹಾಗೆ ಮಾಡೋದು ಹೇಗೆ ಅಂತೀರಾ:
ಬೇಕಾಗುವ ಸಾಮಗ್ರಿಗಳು ಚಿಕನ್ – ಅರ್ಧ ಕೆಜಿ, ಕರಿಬೇವಿನ ಸೊಪ್ಪು – ಸ್ವಲ್ಪ, ಬೆಳ್ಳುಳ್ಳಿ ಹಾಗೂ ಶು೦ಠಿಯ ಪೇಸ್ಟ್ – ಎರಡು ಚಮಚ , ಉಪ್ಪು – ರುಚಿಗೆ ತಕ್ಕಷ್ಟು , ಸಕ್ಕರೆ – ಒ೦ದು ಟೇಬಲ್ ಚಮಚದಷ್ಟು , ಮೆಣಸಿನ ಪುಡಿ – ಎರಡು ಟೇಬಲ್ ಚಮಚಗಳಷ್ಟು , ಗರ೦ ಮಸಾಲಾ ಪುಡಿ – ಒ೦ದು ಟೇಬಲ್ ಚಮಚದಷ್ಟು ,ಜೀರಿಗೆ ಪುಡಿ – ಎರಡು ಟೇಬಲ್ ಚಮಚಗಳಷ್ಟು ,ಕೊತ್ತ೦ಬರಿ ಪುಡಿ – ಎರಡು ಟೇಬಲ್ ಚಮಚಗಳಷ್ಟು ,ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ – ಒ೦ದು ಟೇಬಲ್ ಚಮಚದಷ್ಟು ಒಣಗಿರುವ ಕೆ೦ಪು ಮೆಣಸು – ಎರಡು , ಹುಣಸೆ – ಒ೦ದು ಟೇಬಲ್ ಚಮಚದಷ್ಟು , ಟೊಮೇಟೊ ಪೇಸ್ಟ್ – ಒಂದು ಕಪ್ ನಷ್ಟು , ತುಪ್ಪ – ಏಳು ಟೇಬಲ್ ಚಮಚಗಳಷ್ಟು + ಮತ್ತೆರಡು ಟೇಬಲ್ ಚಮಚಗಳಷ್ಟು ಸಾಕು.
ತಯಾರಿಸುವ ವಿಧಾನ ಹೀಗಿದೆ ಮಾರಾಯ್ರೆ
ತುಪ್ಪವನ್ನು ತವೆಯೊಂದರಲ್ಲಿ ಬಿಸಿ ಮಾಡಿ ಅದಕ್ಕೆ ಕರಿಬೇವಿನ ಸೊಪ್ಪು, ಒಣಗಿರುವ ಕೆಂಪು ಮೆಣಸುಗಳು, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿಯ ಮಿಶ್ರಣದ ಪೇಸ್ಟ್ – ಇವುಗಳನ್ನು ಸೇರಿಸಿರಿ ಹಾಗೂ ಮಧ್ಯಮ ಉರಿಯಲ್ಲಿ ಒಂದು ನಿಮಿಷದವರೆಗೆ ಇವುಗಳನ್ನು ಕಲಕಿಸುತ್ತಾ ಬಿಸಿಮಾಡಿರಿ. ನಂತರ ಟೊಮೇಟೊ ರಸ (ಟೊಮೇಟೋ ಪೇಸ್ಟ್) ವನ್ನು ಅದಕ್ಕೆ ಸೇರಿಸಿ ಮಿಶ್ರಣವನ್ನು ಮೂರರಿಂದ ನಾಲ್ಕು ನಿಮಿಷಗಳವರೆಗೆ ಬೇಯಿಸಿರಿ. ಅನಂತರ ಕೊತ್ತಂಬರಿ ಪುಡಿ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಇವುಗಳನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಕಿರಿ. ತುಪ್ಪವು ಮಸಾಲೆಯಿಂದ ಪ್ರತ್ಯೇಕಗೊಳ್ಳುವವರೆಗೆ ಇವುಗಳ ಮಿಶ್ರಣವನ್ನು ಚೆನ್ನಾಗಿ ಬೇಯಿಸಿರಿ. ಈಗ ಇದಕ್ಕೆ ಮತ್ತೆರಡು ಚಮಚಗಳಷ್ಟು ತುಪ್ಪ, ಚಿಕನ್ನ ತುಣುಕುಗಳು, ಉಪ್ಪು, ಗರಂ ಮಸಾಲಾ ಪುಡಿ, ಹಾಗೂ ಕಾಳುಮೆಣಸಿನ ಪುಡಿಗಳನ್ನು ಸೇರಿಸಿರಿ.
ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಐದರಿಂದ ಆರು ನಿಮಿಷಗಳ ಕಾಲ ಮಿಶ್ರಣವನ್ನು ಕಲಕುತ್ತಾ ಹುರಿಯಿರಿ. ಈಗ ನೀವು ಮೊದಲೇ ಹೆಚ್ಚಿಟ್ಟಿರುವ ಕೊತ್ತಂಬರಿ ಸೊಪ್ಪಿನ ಅರ್ಧಪಾಲನ್ನು, ಹಾಗೂ ಸಕ್ಕರೆಯನ್ನು ಸೇರಿಸಿರಿ. ತವೆಯನ್ನು ಮುಚ್ಚಿ ಎಂಟರಿಂದ ಹತ್ತು ನಿಮಿಷಗಳ ಕಾಲ ಮ೦ದ ಉರಿಯಲ್ಲಿ ಬೇಯಿಸಿರಿ. ಇದಾದ ಬಳಿಕ, ಮುಚ್ಚಳವನ್ನು ತೆರೆದು ಅದಕ್ಕೆ ಹುಣಸೆಹುಳಿಯ ಪೇಸ್ಟ್ ಅನ್ನು ಸೇರಿಸಿರಿ. ಪುನ: ತವಾವನ್ನು ಮುಚ್ಚಿ ಚಿಕನ್ ಸಂಪೂರ್ಣವಾಗಿ ಬೇಯುವವರೆಗೆ ಐದರಿ೦ದ ಆರು ನಿಮಿಷಗಳ ಕಾಲ ಬೇಯಿಸುವುದನ್ನು ಮುಂದುವರಿಸಿರಿ. ಇದಾದ ಬಳಿಕ, ಉರಿಯನ್ನು ನಂದಿಸಿ, ತವೆಯಲ್ಲಿರುವ ಮಿಶ್ರಣವನ್ನು ಉಳಿದಿರುವ ಕೊತ್ತ೦ಬರಿ ಸೊಪ್ಪುಗಳ ಚೂರಿನಿಂದ ಅಲಂಕರಿಸಿರಿ. ಈಗ ತುಪ್ಪದಲ್ಲಿ ಕರಿದಿರುವ ಚಿಕನ್ ಬಡಿಸಲು ಸಿದ್ಧ. ಈ ಚಿಕನ್ ಖಾದ್ಯವನ್ನು ನೀರ್ ದೋಸೆ ಅಥವಾ ಚಪಾತಿಗಳೊಂದಿಗೆ ಬಡಿಸಬಹುದು. ನಾಲಗೆಗೆ ಒಳ್ಳೆಯ ರುಚಿ ಕೊಡುವುದರಿಂದ ಮತ್ತೆ ಮತ್ತೆ ಇಂತಹ ಖಾದ್ಯ ಮಾಡುವ ಮನಸ್ಸು ನಿಮ್ಮಲ್ಲಿ ಬೆಳೆಯುತ್ತದೆ.