ಜನಿಸಿದ ಮಗುವಿಗೆ ಪ್ಯಾಬ್ಲೋ ಎಂದು ಹೆಸರಿಡಲಾಗಿದೆ. ಜೋಶ್ ಹಾಗೂ ಶಿಲ್ವಾ ಎಂಬ ದಂಪತಿಗೆ ಕಳೆದ ವಾರ ಪ್ಯಾಬ್ಲೋ ಜನಿಸಿದೆ. 1987 ರಲ್ಲಿ ಈ ನಗರದಲ್ಲಿ ಕೊನೆಯ ಬಾರಿಗೆ ಮಗು ಜನಿಸಿತ್ತು. ಆ ಬಳಿಕ ನಗರದಲ್ಲಿ ಮಗು ಜನಿಸಿರಲಿಲ್ಲ. ಪ್ಯಾಬ್ಲೋ ಜನಿಸುವ ಮೂಲಕ ನಗರದ ಜನಸಂಖ್ಯೆ 85 ಕ್ಕೇರಿದೆ.
ನಗರದಲ್ಲಿ ಮಗು ಜನಿಸಿರುವುದು ಕನಸು ನನಸಾದಂತೆ ಆಗಿದೆ ಎಂದು ಮೇಯರ್ ಗೈಕೋಮೋ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಗರದಲ್ಲಿ ಸಾವಿರ ಜನ ಇದ್ದರು. ಬಳಿಕ ನಗರದಿಂದ ಜನ ವಲಸೆ ಹೋಗಿದ್ದರು.