ದೊಡ್ಡ ಸುದ್ದಿ ಸಿನಿಮಾ ಸುದ್ದಿ

ದೀಪ್ತಿ ಕಿಡ್ನಾಪ್‌ಗೆ ಶಾರೂಖ್‌ ‘ಡರ್‌’ ಸ್ಫೂರ್ತಿ

ಹರಿಯಾಣದ ನಿವಾಸಿ ದೇವೇಂದ್ರ ಎಂಬ ಸೈಕೋ ದೀಪ್ತಿಯನ್ನು ಲವ್ ಮಾಡುತ್ತಿದ್ದ. ಆದರೆ ದೀಪ್ತಿಗೆ ತನ್ನ ಪ್ರಿತಿಯನ್ನು ವ್ಯಕ್ತಪಡಿಸಲು ಹೆದರಿದ್ದ. ಜೊತೆಗೆ ಈ ಪ್ರೀತಿ ವಿಷಯ ಕೂಡಾ ದೀಪ್ತಿಗೆ ಗೊತ್ತಿರಲಿಲ್ಲ. ಪ್ರೇಮ ನಿವೇದನೆ ಮಾಡದ ದೇವೇಂದ್ರ ತನ್ನ ಸ್ನೇಹಿತರ ಜೊತೆಗೂಡಿ, ಶಾರೂಖ್ ಖಾನ್ ನಟಿಸಿದ್ದ ‘ಡರ್‌’ ಚಿತ್ರದಿಂದ ಸ್ಫೂರ್ತಿಗೊಂಡು ಆ ಚಿತ್ರದಲ್ಲಿನ ಕಿಡ್ನಾಪ್‌ ಮಾದರಿಯಲ್ಲಿ   ದೀಪ್ತಿಯನ್ನು ಕಿಡ್ನಾಪ್ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ 5ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಆಟೋ ಚಾಲಕರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಬಂಧಿತರಲ್ಲಿ ಓರ್ವ ದೀಪ್ತಿಗೆ ಪರಿಚಿತನಿದ್ದ ಎನ್ನಲಾಗಿದೆ. ದೀಪ್ತಿಯನ್ನು ಬುಧವಾರ ಅಪಹರಿಸಿದ್ದರು. ಬಳಿಕ ದೀಪ್ತಿ ಅಪಹರಣಕಾರರಿಂದ ತಪ್ಪಿಸಿಕೊಂಡು ದೆಹಲಿಗೆ ಬಂದಿದ್ದಳು.