ಬಾಲಿವುಡ್‌ನಲ್ಲಿ ತನ್ನ ವಿಭಿನ್ನ ರೀತಿಯಾದ ಮೋಶನ್ ಪೋಸ್ಟರ್ ಮತ್ತು ಪ್ರಮೋಶನ್ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ಕಿ ಅಂಡ್ ಕಾ. ಈ ಚಿತ್ರದಲ್ಲಿ ಕರೀನಾ – ಅರ್ಜುನ್ ಕಪೂರ್ ಫ್ರೆಶ್ ಪೇರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಹಳೇ ವಿಷಯ. ಅದರೀಗ ಕರೀನಾ- ಅರ್ಜುನ್ ಕಪೂರ್ ಲಿಪ್ ಲಾಕ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಕರೀನಾ ಅರ್ಜುನ್ ಕಪೂರ್‌ಗೆ ತಾಳಿ ಕಟ್ಟುತ್ತಿರುವ ಮೋಶನ್ ಪೋಸ್ಟರ್ ಒಂದು ಹೆಚ್ಚು ಸದ್ದು ಮಾಡಿತ್ತು. ಆದರೆ ಈಗ ಕರೀನಾ ಮತ್ತು ಅರ್ಜುನ್ ರೋಮಾಂಟಿಕ್ ಆಗಿ ಕಿಸ್ ಮಾಡ್ತಿರೋ ಪೋಸ್ಟರ್ ಒಂದನ್ನ ರಿಲೀಸ್ ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದೆ.
ಆರ್.ಬಲ್ಕಿ ನಿರ್ದೇಶನದ ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಪತ್ನಿ ಜಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಏಪ್ರಿಲ್ 1 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.