ನೈಜ ಘಟನೆ ಆಧಾರಿತ ಚಿತ್ರ ’ಮಾಸ್ತಿಗುಡಿ’ಯ ನಾಯಕಿ ಯಾರು ಅನ್ನೋದು ಮಾತ್ರ ಇಲ್ಲಿವರೆಗೂ ಗೊತ್ತಾಗಿರಲಿಲ್ಲ. ಈಗ ಈ ಸಸ್ಪೆನ್ಸ್ಗೆ ತೆರೆ ಬಿದ್ದಿದೆ. ಅಮೂಲ್ಯ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
೧೯೯೦ರಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಿರಂತರವಾಗಿ ಹುಲಿಗಳು ಸಾವನ್ನಪ್ಪುತ್ತಿದ್ದವಂತೆ. ಅದರ ಹಿಂದಿನ ರಹಸ್ಯವೇನು ಅನ್ನೋದೇ ಮಾಸ್ತಿಗುಡಿ ಒನ್ ಲೈನ್ ಸ್ಟೋರಿ. ಇತ್ತೀಚೆಗೆ ಹೆಚ್ಚು ಗ್ಲಾಮರಸ್ ರೋಲ್ಗಳಲ್ಲಿ, ಲವರ್ ಗರ್ಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೂಲ್ಯ ಮಾಸ್ತಿಗುಡಿಯಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚ್ತಾರಂತೆ. ಈ ಚಿತ್ರದ ಮೂಲಕ ಮತ್ತೆ ಸ್ಕೂಲ್ ಗರ್ಲ್ ರೋಲ್ ಅಮೂಲ್ಯಗೆ ದಕ್ಕಿದೆ ಎನ್ನುವುದು ಚಿತ್ರತಂಡದ ಮಾತು. ಈ ಹಿಂದೆ ಅಮೂಲ್ಯ ನಟಿಸಿದ ಚೆಲುವಿನ ಚಿತ್ತಾರ ಅಮೂಲ್ಯರ ಸ್ಕೂಲ್ ಲೈಫ್ ನಟನೆ ಎಲ್ಲರಿಗೂ ಪ್ರಿಯವಾಗಿತ್ತು.