ಜೇಮ್ಸ್ ಬಾಂಡ್ ಪಾತ್ರ ನಿರ್ವಹಿಸುತ್ತಿರುವ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಇನ್ನು ಮುಂದೆ ಬಾಂಡ್ ನಟನೆಯಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ‘ಪ್ಯೂರಿಟಿ’ ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ
ಎನ್ನಲಾಗಿದೆ.
೨೦ ಧಾರವಾಹಿಗಳ ‘ಪ್ಯೂರಿಟಿ’ ಟಿವಿ ಸೀರಿಯಲ್, ಹಲವು ಸೀಸನ್ಗಳಾಗಿ ಪ್ರಸಾರ ಕಾಣ ಲಿದೆ. ಇದಕ್ಕಾಗಿ ೪೭ ವರ್ಷದ ಡೇನಿಯಲ್ ಕ್ರೇಗ್, ತಮ್ಮ ಬ್ರಾಂಡ್ ಪಾತ್ರವನ್ನೇ ಬಿಟ್ಟುಕೊಟ್ಟಿದ್ದಾರೆ. ಬಾಂಡ್ ಸರಣಿಯ ಇತ್ತೀಚಿನ ಚಿತ್ರ ‘ಸ್ಪೆಕ್ಟರ್’ ಬಿಡುಗಡೆಯಾದಾಗಲೇ ಡೇಲಿಯನ್, ಬಾಂಡ್ ಇಮೇಜ್ ನಿಂದ ಹೊರಬರುತ್ತಾರೆ ಎಂಬ ಗುಸುಗುಸು ಕೇಳಿಬಂದಿತ್ತು.