ದೊಡ್ಡ ಸುದ್ದಿ ಸಿಟಿ ಸುದ್ದಿ

ದುಡ್ಡಿದ್ದರೂ ಸಾಲ ತೀರಿಸದ ದೊರೆ!

ಮಲ್ಯ ಒಡೆತನದ ಯುನೈಟೆಡ್‌ ಬ್ರೇವರಿಸ್ ಹೋಲ್ಡಿಂಗ್ಸ್‌, ಕಿಂಗ್‌ಫಿಷರ್‌ ಸಂಸ್ಥೆಗೆ ಪಡೆದ 800 ಕೋಟಿ ಸಾಲವನ್ನು ತೀರಿಸುವ  ಸಾಮರ್ಥ್ಯವಿದ್ದರೂ ತೀರಿಸಿಲ್ಲ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಈ ಘೋಷಣೆ ಹೊರಬೀಳುತ್ತಿದ್ದಂತೆ ಮಂಗಳವಾರ ಯುಬಿಎಚ್‌ನ ಶೇರು ವಹಿವಾಟಿನಲ್ಲಿ ಕುಸಿತ ಕಂಡು ಬಂದಿದೆ.

ಕಿಂಗ್‌ಫಿಷರ್‌ ಏರ್‌ಲೈನ್ಸ್  2010ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ವಿವಿಧ ಬ್ಯಾಂಕ್‌ಗಳ ಒಕ್ಕೂಟದಿಂದ 6,900 ಕೋಟಿ ಸಾಲ ಪಡೆದಿತ್ತು.

ಕಳೆದ ನವೆಂಬರ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಕೂಡಾ ವಿಜಯಮಲ್ಯ, ಕಿಂಗ್ ಫಿಷರ್ ಏರ್‌ಲೈನ್ಸ್ ಮತ್ತು ಯುನೈಟೆಡ್ ಬ್ರೇವರಿಸ್‌ ಹೋಲ್ಡಿಂಗ್ಸ್‌ ‘ಉದ್ದೇಶಪೂರ್ವಕವಾಗಿ ಸಾಲ ತೀರಿಸದವರು’ ಎಂದು ಘೋಷಿಸಿತ್ತು. ಈಗ ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಕೂಡಾ ಅದೇ ಘೋಷಣೆ ಮಾಡಿದೆ.

ಮಲ್ಯರ ಯುಬಿಎಚ್‌ ಪಂಜಾಬ್ ಬ್ಯಾಂಕ್‌ನ ಕ್ರಮವನ್ನು ಪ್ರಶ್ನಿಸುವುದಾಗಿ ಹೇಳುತ್ತಿದೆ. ಕಂಪನಿಯ ವಕೀಲರು ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮ ಕುರಿತು ಚರ್ಚೆ ನಡೆಸುತ್ತಿದ್ದಾರೆ.