ಸಿನಿಮಾ ಸುದ್ದಿ

ರಮ್ಯಾಗೆ ಮಗು ಆಗಿರೋದು ದಿಟನಾ..?

ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾಗೆ ಮಗು ಆಗಿದೆ. ಅದೇ ಕಾರಣಕ್ಕೆ ಅವರು ಲಂಡನ್‌ಗೆ ಹೋಗಿದ್ದರು. ಹಾಗಂತ ಒಂದು ಸುದ್ದಿ ಕಳೆದ ವರ್ಷ ಭಾರಿ ಸಂಚಲನ ಮೂಡಿಸಿತ್ತು.

ಈ ಕುರಿತು ಕೊನೆಗೂ ರಮ್ಯಾ ಮೌನ ಮುರಿದಿದ್ದಾರೆ. ಇದೆಲ್ಲಾ ಸುಳ್ಳು ಮತ್ತು ತಮ್ಮ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಪ್ರಯತ್ನ ಮಾಡುತ್ತಿರುವವರು ಯಾರು ಎಂಬುದನ್ನು ಸಹ ಪತ್ತೆ ಹಚ್ಚಿದ್ದಾರೆ.

ಅವರ ಪ್ರಕಾರ ಅಂತಹ ಸುದ್ದಿಗಳನ್ನು ಹಬ್ಬಿಸಿ ಹೆಸರು ಕೆಡಸುತ್ತಿರುವುದು ಬೇರ‍್ಯಾರು ಅಲ್ಲ, ಮಂಡ್ಯದ ಸಂಸದ ಪುಟ್ಟರಾಜು ಮತ್ತು ಅವರ ಕಡೆಯವರಂತೆ. ಅದಕ್ಕೆ ಕಾರಣವೇನೆಂದರೆ, ರಮ್ಯಾ ಬಗ್ಗೆ ಇರುವ ಭಯ. ಅದೇ ಕಾರಣಕ್ಕೆ ತಮ್ಮ ಹೆಸರು ಹಾಳು ಮಾಡಿ, ತಮ್ಮ ಕ್ಷೇತ್ರವಾದ ಮಂಡ್ಯದಿಂದ ದೂರ ಇಡುವ ಹುನ್ನಾರವನ್ನು ಪುಟ್ಟರಾಜು ಮತ್ತು ತಂಡದವರು ಮಾಡುತ್ತಿದ್ದಾರೆ ಎನ್ನುವುದು ರಮ್ಯಾ ಅವರ ಆರೋಪ.

ಪುಟ್ಟರಾಜು ಮತ್ತು ಅವರ ಕಡೆಯವರಿಗೆ ನನ್ನ ಕಂಡರೆ ಬಹಳ ಭಯ. ಅದೇ ಕಾರಣಕ್ಕೆ ಅವರು ನನ್ನನ್ನು ಕ್ಷೇತ್ರದಿಂದ ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಅವರು ಹೊರಿಸುತ್ತಿದ್ದಾರೆ. ನನಗೆ ಮಗು ಆಗಿಲ್ಲ. ಇದೆಲ್ಲ ಶುದ್ಧ ಸುಳ್ಳು ಕಡ್ಡಿ ಮುರಿದಂಗೆ ಹೇಳಿದ್ದಾರೆ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ.