ಕಡು ಬಡತನ ಕುಟುಂಬದಲ್ಲಿ ಬೆಳೆದಿರುವ ಕನ್ಹೈಯಾ ಕುಮಾರ್ಗೆ ತಂದೆ-ತಾಯಿ ಹಾಗೂ ಮೂವರು ಸಹೋದರರು. ತಂದೆ ಕೆಲ ವರ್ಷಗಳಿಂದ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಇದರಿಂದ ಮನೆಯಲ್ಲಿ ಸಂಪಾದಿಸುವ ಶಕ್ತಿ ಅವರಿಗಿಲ್ಲ.
ಹಿರಿಯ ಸಹೋದರಿ ಮದುವೆಯಾಗಿದ್ದು, ಹಿರಿಯ ಸಹೋದರ ನರೇಂದ್ರ ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕನ್ಹೈಯಾ ದೆಹಲಿಯಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಕುಟುಂಬದಲ್ಲಿ ಒಟ್ಟು 9 ಜನ ಸದಸ್ಯರಿದ್ದಾರೆ.
ಕುಟುಂಬದ ಆದಾಯ 9 ಸಾವಿರ
ಒಂಬತ್ತು ಸದಸ್ಯರನ್ನೊಳಗೊಂಡಿರುವ ಕನ್ಹೈಯಾ ಕುಮಾರ್ ಕುಟುಂಬದ ಆದಾಯ ಕೇವಲ 9 ಸಾವಿರ ಮಾತ್ರ. ಸಹೋದರ ನರೇಂದ್ರ ತಿಂಗಳಿಗೆ 6 ಸಾವಿರ ರೂ. ಹಾಗೂ ತಾಯಿ ಅಂಗನವಾಡಿಯಲ್ಲಿ ಕೆಲಸ ಮಾಡುವುದರಿಂದ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಡೆಯುತ್ತಾರೆ. ಇದರಲ್ಲಿ ತಂದೆಯ ಆರೋಗ್ಯದ ಖರ್ಚು ಹಾಗೂ ವಿದ್ಯಾಭ್ಯಾಸದ ಖರ್ಚು ಸಹ ನೋಡಿಕೊಳ್ಳಬೇಕು.

ಪ್ರತಿ ಸದಸ್ಯರ ಖರ್ಚು 33.40 ಪೈಸೆ
ಭಾರತ ಸರ್ಕಾರ ಬಡತನ ರೇಖೆಗಿಂತ ಕಡಿಮೆ ಇರುವ ವ್ಯಕ್ತಿ ಪ್ರತಿ ದಿನ 32 ರೂಪಾಯಿ ಖರ್ಚು ಮಾಡುತ್ತಾನೆಂದು ಹೇಳಿದೆ. ಆದರೆ ಕನ್ಹೈಯಾ ಕುಟುಂಬ 33 ರೂ. 40 ಪೈಸೆ ಪ್ರತಿದಿನ ಖರ್ಚು ಮಾಡುತ್ತಿದೆ. ಇಲ್ಲಿಯವರಗೆ ಅವರ ಮನೆಯಲ್ಲಿ ಟಿವಿ, ರೇಡಿಯೋಯಾಗಲಿ ಬಳಕೆಯಾಗುತ್ತಿಲ್ಲ. ಕನ್ಹೈಯಾ ಸ್ಥಿತಿ ಬಗ್ಗೆ ಕುಟುಂಬಕ್ಕೆ ತಿಳಿದುಕೊಳ್ಳಲು ಇಲ್ಲಿಯವರೆಗೂ ಯಾರು ಸಹಾಯ ಸಹ ಮಾಡಿಲ್ಲ.