ತಾಯಿಯಂತೆ ಮುದ್ದು ಮುದ್ದಾಗಿರುವ ಜಾಹ್ನವಿಯನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಶ್ರೀದೇವಿ ಕಾತರರಾಗಿರುದಾಗಿ ಹೇಳಿಕೊಂಡಿದ್ದಾರೆ.
ಇನ್ನೊಂದು ವಿಚಾರವೆಂದರೆ ಜಾಹ್ನವಿಯನ್ನು ಅವರು ಬಾಲಿವುಡ್‌ನಲ್ಲಿಯೇ ನೋಡಲು ಇಷ್ಟಪಡುತ್ತಾರಂತೆ. ಹಾಗಾಗಿ ಇತ್ತೀಚೆಗೆ ಜಾಹ್ನವಿ ಬೇರೆ ಭಾಷೆಯ ಚಿತ್ರದಲ್ಲಿ ನಟಿಸುತ್ತಾರೆ ಎಂದು ಹರಿದಾಡುತ್ತಿದ್ದ ರೂಮರ್‌ಗೆ ಕೊನೆ ಹಾಡಿದ್ದಾರೆ.
ಕೆಲ ದಿನಗಳ ಹಿಂದೆ ಹರಿದಾಡಿದ ಸುದ್ದಿಗಳ ಪ್ರಕಾರ ಜಾಹ್ನವಿ ಫ್ಯಾಶನ್ ಡಿಸೈನಿಂಗ್ ಮಾಡುತ್ತಿದ್ದಾರೆ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಜಾಹ್ನವಿ ಲಾಸ್ ಎಂಜಲೀಸ್‌ನಲ್ಲಿ ಚಲನಚಿತ್ರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ತಾಯಿಯ ಆಸೆಯಂತೆ ಜಾಹ್ನವಿ ಇಷ್ಟರಲ್ಲೆ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡರೆ ಆಚ್ಚರಿಯಿಲ್ಲ.