ದೊಡ್ಡ ಸುದ್ದಿ ಹೊಸ ಸುದ್ದಿ

30,000 ರೂಪಾಯಿ ಐಫೋನ್‌ 68 ರೂಗೆ?

ಇ-ಕಾಮರ್ಸ್‌ನಲ್ಲಿ ಸ್ನ್ಯಾಪ್‌ಡೀಲ್‌ ಆಫರ್‌ ನೀಡಿತ್ತು.  ಅದು ಕೇವಲ 68 ರೂ.ಗೆ ಐಫೋನ್‌ ಖರೀದಿಸುವುದು. ಇದನ್ನು ನೋಡಿದ ಪಂಜಾಬ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಖಿಲ್‌ ಬನ್ಸಾಲ್‌ ತಕ್ಷಣ ಆರ್ಡರ್‌ ಮಾಡಿದ್ದಾನೆ.ಬಳಿಕ ಆರ್ಡರ್‌ ಮಾಡಿ ಫೋನ್‌ ಬರುತ್ತೆ ಅಂತಾ ಕಾದು ಕುಳಿತಿದ್ದಾನೆ. ಆದರೆ ವಿದ್ಯಾರ್ಥಿಯ ಈ ಆರ್ಡರ್‌ ಅನ್ನು ಸ್ನ್ಯಾಪ್‌ಡೀಲ್‌ ರದ್ದುಪಡಿಸಿದೆ. ಎಷ್ಟೇ ದಿನವಾದ್ರೂ ಫೋನ್‌ ವಾಪಸ್‌ ಬರದಿದ್ದಾಗ ನಿಖಿಲ್‌ ಸ್ನ್ಯಾಪಡೀಲ್‌ ಕಚೇರಿಗೆ ಫೋನಾಯಿಸಿದ್ದಾನೆ. ಆದರೆ ಇದಕ್ಕೆ ಅವರು ಸರಿಯಾದ ಉತ್ತರ ನೀಡಿಲ್ಲ.

ಇದರಿಂದ ಕೋಪಗೊಂಡ ನಿಖಿಲ್‌ ಪಂಜಾಬ್‌ನ ಸಂಗ್ರೂರು ಜಿಲ್ಲೆಯ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ಪ್ರಕರಣ ಕೈಗೆತ್ತಿಕೊಂಡ ಕೋರ್ಟ್‌ ಸ್ನ್ಯಾಪಡೀಲ್‌ಗೆ ಛೀಮಾರಿ ಹಾಕಿದೆ. ಜೊತೆಗೆ ಐಫೋನ್‌ ಮೊಬೈಲ್‌ ಅನ್ನು ವಿದ್ಯಾರ್ಥಿಗೆ ನೀಡಿ, 2 ಸಾವಿರ ದಂಡ ಕಟ್ಟುವಂತೆ ಆದೇಶ ಸಹ ನೀಡಿದೆ.

ಅದಾಗ್ಯೂ ಸಂಗ್ರೂರು ನ್ಯಾಯಾಲಯದ ಆದೇಶ ಪ್ರಶ್ನಿಸಿ ಸ್ನ್ಯಾಪಡೀಲ್‌ ಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲಿಯೂ ಅದಕ್ಕೆ ಛೀಮಾರಿ ಹಾಕಿ 10 ಸಾವಿರ ದಂಡ ವಿಧಿಸಿದೆ.