ನೋಯ್ಡಾ ಮೂಲದ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನಾ ಸಂಸ್ಥೆ ರಿಂಗಿಂಗ್ ಬೆಲ್ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಈಗ ಸ್ಮಾರ್ಟ್ ಫೋನ್ ವಿವಾದದ ಕೇಂದ್ರ ಬಿಂದುವಾಗಿದೆ.
ಬುಧವಾರ (ಫೆಬ್ರವರಿ 16) ದಿಂದ ಕೇವಲ 251 ರು ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗಿದ್ದ ಗ್ರಾಹಕರು ಈಗ ಬೆಚ್ಚಿಬೀಳುವ ಸತ್ಯಗಳು ಹೊರಬರುತ್ತಿದೆ. ಹಂಗೂ ಹಿಂಗೂ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರಿಗೆ ಫೋನ್ ಯಾವಾಗ ಕೈ ಸೇರುವುದೋ ಎಂಬ ಆತಂಕ ಎದುರಾಗಿದೆ.
ಜೊತೆಗೆ ರಿಂಗಿಂಗ್ ಬೆಲ್ ಕಂಪನಿ ಕಾಪಿರೈಟ್ ಉಲ್ಲಂಘನೆ ಆರೋಪವನ್ನು ಹೊತ್ತುಕೊಂಡಿದೆ. ಆಪಲ್ ಐಫೋನ್ ವಿನ್ಯಾಸವನ್ನು ಕದ್ದು ಅತಿಕಡಿಮೆಯ ಬೆಲೆಯ ಫೋನ್ ವಿನ್ಯಾಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಬಿಐಎಸ್ ಸರ್ಟಿಫಿಕೇಷನ್ ಕೂಡಾ ಪಡೆದುಕೊಂಡಿಲ್ಲ. ಈ ಬಗ್ಗೆ ಉತ್ತರಪ್ರದೇಶ ಸರ್ಕಾರ ತನಿಖೆ ನಡೆಸಲಿ ಎಂದು ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರು ಆಗ್ರಹಿಸಿದ್ದಾರೆ.