ದೊಡ್ಡ ಸುದ್ದಿ ಸಿಟಿ ಸುದ್ದಿ

1500 ರೂಗೆ ವೈ-ಪೈ ಬ್ರಾಡ್ ಬ್ಯಾಂಡ್ ಸಿಗುತ್ತೆ!

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ ‘ಬಿಎಸ್ಸೆನ್ನೆಲ್’ ತನ್ನ ಗ್ರಾಹಕರಿಗೆ 1500 ರೂ.ಗೆ ವೈ-ಫೈ ಬ್ರಾಡ್‌ಬ್ಯಾಂಡ್ ಮೊಡೆಮ್ ನೀಡುವ ಆಕರ್ಷಕ ಯೋಜನೆ ಅನಾವರಣ ಗೊಳಿಸಿದೆ. ಜತೆಗೆ ಶೇ 100 ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಸಹ ಪ್ರಕಟಿಸಿದೆ.

7೦೦ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಬ್ರಾಡ್‌ಬ್ಯಾಂಡ್ ಯೋಜನೆಯ ಚಂದಾದಾರಿಕೆ ಪಡೆದಿರುವ ಹೊಸ ಬಿಎಸ್ಸೆನ್ನೆಲ್ ಗ್ರಾಹಕರು, 1500 ರೂ.ಗೆ ಬ್ರಾಡ್‌ಬ್ಯಾಂಡ್ ಮೊಡೆಮ್ ಖರೀದಿಸಬ ಹುದು. ಮೊಡೆಮ್ ಖರೀದಿಸುವ ಗ್ರಾಹಕರು ಪ್ರತಿ ತಿಂಗಳು 100 ರೂ.ನಂತೆ ಸತತ 15 ತಿಂಗಳ ಕಾಲ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ.
ಮಾರ್ಚ್ 31ರ ವರೆಗೆ ಮಾತ್ರ ಈ ಯೋಜನೆ ಲಭ್ಯ ಎಂದು ಬಿಎಸ್ಸೆನ್ನೆಲ್ ತಿಳಿಸಿದೆ. ಹೊಸ ಚಂದಾದಾರರು ಮೂರು ವರ್ಷಗಳ ಖಾತರಿ ಇರುವ ‘ಕಾಲರ್ ಲೈನ್ ಗುರುತಿಸುವ ಫೋನ್ ಸಾಧನ’ವನ್ನು ಪಡೆಯಲಿದ್ದಾರೆ ಎಂದು ಅದು ತಿಳಿಸಿದೆ.