ಇಡಿ ದೇಶ ಇಂದು ಮೋಹಿತ್ ಗೊಯಲ ಅವರ ೨೫೧ರೂ. ಸ್ಮಾರ್ಟ್ಫೋನ್ ಬಗ್ಗೆ ಮಾತಾಡುತ್ತಿದೆ. ಆದರೆ ಈ ಯುವಕ ಒಬ್ಬ ಸಣ್ಣ ಕಿರಾಣಿ ಅಂಗಡಿ ಮಾಲೀಕನ ಮಗ ಎಂದು ಬಹುತೇಕರಿಗೆ ಗೊತ್ತಿಲ್ಲ. ಮೋಹಿತ್ ತಂದೆ ರಾಜೇಶ್ ಗೊಯಲ ಅವರ ಪುಟ್ಟ ಕಿರಾಣಿ ಅಂಗಡಿ ಮೇಲೆ ಬೂದು ಬಣ್ಣದ ಬೋರ್ಡ್ನಲ್ಲಿ ‘ರಾಮ್ ಜಿ’ ಎಂದು ಬರೆಯಲಾಗಿದೆ.
ಅವರಿಗೆ ದೇಶದ ಸ್ಮಾರ್ಟ್ ಫೋನ್ ವಲಯದಲ್ಲಿ ನಡೆಯುತ್ತಿರುವ ಗಡಿಬಿಡಿಯ ಚಟುವಟಿಕೆ ಬಗ್ಗೆ ಗಮನವೇ ಇಲ್ಲ.
ಆದರೆ ತನ್ನ ಮಗ ಏನೋ ದೊಡ್ಡದನ್ನು ಸಾಧಿ ಸುತ್ತಾನೆ ಎನ್ನುವ ಕಲ್ಪನೆ ಇದೆ. “ಶಾಲಾ ದಿನಗಳು ಮುಗಿದ ನಂತರ ಮೋಹಿತ್ ನೇರವಾಗಿ ನೋಯ್ಡಾಗೆ ತೆರಳಿ ಅಲ್ಲಿನ ಅಮಿಟಿ ವಿಶ್ವವಿದ್ಯಾಲಯಲ್ಲಿ ಪದವಿ ಮುಗಿಸಿದ್ದರು.
ಕೊನೆಯ ಬಾರಿಗೆ ನಾವಿಬ್ಬರೂ ಭೇಟಿಯಾದಾಗ ಆತ ಒಂದು ಕಂಪನಿ ತೆರೆಯಲು ನಿರ್ಧರಿಸಿದ್ದ. ನಾನು ಸಾಲ ನೀಡಿದೆ. ಅದೀಗ ಇಷ್ಟು ದೊಡ್ಡದಾಗಿದೆ,” ಎನ್ನುತ್ತಾರೆ ರಿಂಗ್ ಬೆಲ್ಸ್ ಕಂಪನಿಯ ನಿರ್ದೆಶಕರಲ್ಲಿ ಒಬ್ಬರಾಗಿರುವ ಗೊಯಲ.
ರಿಂಗಿಂಗ್ ಬೆಲ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೋಹಿತ್, ಗರ್ಹಿಪುಖ್ತ ಎಂಬ ಪುಟ್ಟ ಪಟ್ಟಣದಲ್ಲಿ ಕಿರಾಣಿ ಅಂಗಡಿಯಲ್ಲಿ ಅಪ್ಪನಿಗೆ ನೆರವಾಗುತ್ತಲೇ ತಮ್ಮ ಬದುಕಿನ ಬಹುತೇಕ ದಿನಗಳನ್ನು ಕಳೆದಿದ್ದರು.