ಮಂಗಳೂರು: ಮನೆಯಲ್ಲಿ ಪೇಡಾ ತಯಾರಿಸಲು ಹಾಲು ಬಿಸಿ ಮಾಡು ತ್ತಿದ್ದಾಗ ಹಾಲು ಕೆಟ್ಟು ಪ್ಲಾಸ್ಟಿಕ್ ರೂಪ ಪಡೆದ ಆತಂಕಕಾರಿ ಘಟನೆ ನರಿಂಗಾನ ಗ್ರಾಮದ ತೌಡುಗೋಳಿಯ ಪಿ. ಎಸ್.ಬಾವಾ ಎಂಬವರ ಮನೆಯಲ್ಲಿ ನಡೆದಿದೆ.
ಪ್ಯಾಕೆಟ್ ಹಾಲು ಸಂಪೂರ್ಣ ಪ್ಲಾಸ್ಟಿಕ್ ರೂಪ ಪಡೆದಿರುವ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಗಮನಕ್ಕೆ ತರಲಾಗಿದ್ದು, ಆ ಹಿನ್ನೆಲೆಯಲ್ಲಿ ಮಂಗ ಳೂರಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿ ಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕತೆ ಏನೂ: ತೌಡುಗೋಳಿ ಕ್ರಾಸ್ ನಿವಾಸಿ ಪಿ. ಎಸ್. ಬಾವಾ ಅವರು ತನ್ನ ಮನೆಗೆ ಗುರುವಾರ ರಾತ್ರಿ
ಹಾಲು ಕೊಂಡೊಯ್ದಿದ್ದು ಸ್ವಲ್ಪ ಹುಳಿ ಬಂದಿದ್ದರಿಂದ ಪೇಡಾ ಮಾಡಲು ಮುಂದಾದರು. ಸಾಮಾನ್ಯವಾಗಿ
ಬಾವಾ ಅವರು ಹಾಲು ಗಟ್ಟಿಯಾದಾಗ ಪೇಡಾ ತಯಾರಿಸುತ್ತಿದ್ದರು. ಗುರುವಾರ ಅದೇ ರೀತಿ ಪೇಡಾ
ಮಾಡಲು ಪ್ರಯತ್ನಿಸುತ್ತಿದ್ದಂತೆಯೇ ಹಾಲು ಪ್ಲಾಸ್ಟಿಕ್ ನಂತೆ ಬದಲಾಗಿದ್ದು ಸ್ಥಳೀಯರಲ್ಲಿ ಕುತೂಹಲ ಮನೆ
ಮಾಡಿದೆ.