ಕೆಲ ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಬ್ಯಾಚಲರ್ ಲೈಫ್ನ್ನು ಚೂಸ್ ಮಾಡುವ ಹಿಂದೆ ಒಂದು ಕಾರಣವಿದೆ ಎನ್ನುತ್ತಾರೆ. ಇತ್ತೀಚೆಗೆ ಬಾಲಿವುಡ್ ಅಂಗಳದಲ್ಲಿ ಸಾಲು ಸಾಲು ಜೋಡಿಗಳ ಬ್ರೇಕಪ್ ಆಗುತ್ತಿದೆ. ಅದರಂತೆ ಸಲ್ಲುನ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೋಹೆಲ್ ಸಹ ವಿಚ್ಛೇದನದ ದಾರಿ ತುಳಿಯುವ ಹಂತದಲ್ಲಿದ್ದಾರೆ.
ಬಹುಶಃ ತನ್ನ ಕುಟುಂಬದ ಸಂಬಂಧಗಳಲ್ಲಿ ಈ ತೆರನಾದ ಬಿರುಕುಗಳು ಉಂಟಾಗುತ್ತಿರುವುದರಿಂದ ಸಲ್ಲು ಏಕಾಂಗಿಯಾಗಿರಲು ನಿರ್ಧರಿಸಿದಂತಿದೆ ಎನ್ನುತ್ತಾರೆ ಕೆಲವರು. ಆದರೆ ಹಿಂದೊಮ್ಮೆ ಮದುವೆ ವಿಚಾರವಾಗಿ ಅವರನ್ನು ಕೇಳಿದಾಗ ಮದುವೆ ಆಗೋದು ಡೌಟು ಎಂದು ಹೇಳಿದ್ದರು.