ಲೈಫ್ ಸ್ಟೈಲ್

ಕಣ್ಣುಗಳು ಹೇಳುತ್ತವೆ.. ಯಾವ ಮಹಿಳೆ ಚಾಲಾಕಿ!

ಯಾವ ಕಣ್ಣಿನ ಬಣ್ಣ ಅವರ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ತಿಳಿಯಿರಿ….

ಕಪ್ಪು ಕಣ್ಣು :
ಸಮುದ್ರ ಶಾಸ್ತ್ರದ ಪ್ರಕಾರ ಯಾವ ಮಹಿಳೆಯ ಕಣ್ಣು ಕಪ್ಪು ಹಾಗೂ ದೊಡ್ಡದಾಗಿದ್ದರೆ ಅವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಭೌತಿಕ ಸುಖ – ಸಂಪತ್ತಿನ ಆನಂದ ಸಿಗುತ್ತದೆ ಎಂದು ಅರ್ಥ. ಇಂತಹ ಮಹಿಳೆ ಅವರ ಕುಟುಂಬಕ್ಕೆ ಭಾಗ್ಯಶಾಲಿಯಾಗಿರುತ್ತಾರೆ.

ಜಿಂಕೆಯಂತಹ ಕಣ್ಣುಗಳು :
ಮಹಿಳೆಯ ಕಣ್ಣನ್ನು ಜಿಂಕೆಯ ಕಣ್ಣುಗಳಿಗೆ ಹೋಲಿಸಲು ಒಂದು ಕಾರಣ ಇದೆ. ಇಂತಹ ಮಹಿಳೆಯರು ಸುಂದರವಾಗಿ ಕಾಣುತ್ತಾರೆ ಹಾಗೂ ತುಂಬಾ ನಿಷ್ಠಾವಂತರಾಗಿರುತ್ತಾರೆ. ಇವರು ಸ್ನೇಹ ಮತ್ತು ಜವಾಬ್ಧಾರಿಯನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ.

ಹಳದಿ ಕಣ್ಣುಗಳು :
ಯಾರ ಕಣ್ಣುಗಳು ಹಳದಿ ಬಣ್ಣದಿಂದ ಕೂಡಿರುತ್ತದೆ ಅವರು ಚತುರರಾಗಿರುತ್ತಾರೆ. ಇಂತಹ ಮಹಿಳೆಯರ ಮೇಲೆ ಹೆಚ್ಚಾಗಿ ನಂಬಿಕೆ ಇಡಬೇಡಿ ಎಂದು ಶಾಸ್ತ್ರಗಳು ಹೇಳುತ್ತದೆ. ಇವರಿಂದ ಗುಟ್ಟಿನ ವಿಷಯವನ್ನು ಮುಚ್ಚಿಡಬೇಕು. ಮಾತನಾಡುತ್ತಿರುವ ಸಂದರ್ಭದಲ್ಲಿ ಕಣ್ಣನ್ನು ಒತ್ತುವ ಮಹಿಳೆಯರನ್ನು ಸಹ ನಂಬಬಾರದು.

ಜಲೀಯ ಕಣ್ಣುಗಳು :
ಜಲೀಯ ಕಣ್ಣುಗಳನ್ನು ಹೊಂದಿದ ಮಹಿಳೆಯರ ಜೀವನ ಸಂಪೂರ್ಣವಾಗಿ ಸುಖ ಸಂತೋಷದಿಂದ ಕೂಡಿರುತ್ತದೆ.

ಗುಳಿಬಿದ್ದ ಕಣ್ಣುಗಳು :
ಗುಳಿ ಬಿದ್ದ ಕಣ್ಣುಗಳನ್ನು ಹೊಂದಿದ ಮಹಿಳೆಯರ ಸ್ವಭಾವ ಚಂಚಲವಾಗಿರುತ್ತದೆ.