ಇನ್ನು 2 ವರ್ಷಗಳು ಕಳೆದರೆ, ಚಲನ ಚಿತ್ರಗಳ ಡೌನ್ಲೋಡ್ ಬಟನ್ ಒತ್ತಿ ಕಣ್ಣು ಮಿಟುಕಿಸುವಷ್ಟರಲ್ಲಿ ಇಡೀ 3 ಗಂಟೆಯ ಚಲನಚಿತ್ರ ನಿಮ್ಮ ಫೋನ್ನ ಗ್ಯಾಲರಿ ಸೇರಿರುತ್ತದೆ.
ಏ 5ಜಿ ಹೈ… ಐದನೇ ತಲೆಮಾರಿನ(5ಜಿ) ವೈರ್ಲೆಸ್ ತಂತ್ರeನ ಅಭಿವೃದ್ಧಿ ಕಾರ್ಯ ಕ್ಷಿಪ್ರಗತಿ ಯಲ್ಲಿ ಸಾಗಿದ್ದು, ಇಂಟರ್ನೆಟ್ನ ವೇಗ ನಿಮ್ಮ ಮನೋವೇಗಕ್ಕೆ ಸ್ಪರ್ಧೆಯೊಡ್ಡುವ ಸಮಯ ದೂರವಿಲ್ಲ. ಲಂಡನ್ನ ದಕ್ಷಿಣ ಭಾಗದ ಪಟ್ಟ ಣವೊಂದರಲ್ಲಿರುವ ಸರ್ರೆ ವಿಶ್ವವಿದ್ಯಾ ಲಯದ ಸಂಶೋಧನಾ ಕೇಂದ್ರವು ಸ್ಯಾಮ್ಸಂಗ್ ಹಾಗೂ ಫುಜಿಟ್ಸು ಕಂಪನಿಗಳ ಸಹಯೋಗ ದೊಂದಿಗೆ ವಿಶ್ವದ ಅತಿ ವೇಗದ ಫೋನ್ ನೆಟ್ವರ್ಕ್ ಹುಟ್ಟುಹಾಕು ವಲ್ಲಿ ನಿರತವಾಗಿದೆ. ಈ 5ಜಿ ತಂತ್ರ ನವು ೪ಜಿ ನೆಟ್ವಕ್ ಗಿಂತಲೂ ನೂರು ಪಟ್ಟು ವೇಗದಲ್ಲಿ ಕಾರ್ಯ ನಿರ್ವಹಿಸಲಿದೆ. ಅಂದರೆ ಒಂದು ಚಲನಚಿತ್ರ ಡೌನ್ಲೋಡ್ ಆಗಲು ಕೇವಲ 2ರಿಂದ 5ಸೆಕೆಂಡ್ಗಳು ಸಾಕು!
2018ರ ಆರಂಭವನ್ನು ಗಡುವು ಇಟ್ಟು ಕೊಂಡು ಕೆಲಸ ಮಾಡುತ್ತಿರುವ ಕಂಪನಿ ಗಳು, 5ಜಿಯನ್ನು ಫೋನ್, ಕಂಪ್ಯೂಟರ್ ಗಳು ಮಾತ್ರವಲ್ಲದೆ, ಸ್ಮಾರ್ಟ್ವಾಚ್ಗಳು, ಗೃಹ ಯಂತ್ರೋಪಕರಣ ಗಳಲ್ಲಿರುವ ಅತಿ ಚಿಕ್ಕ ಸೆನ್ಸಾರ್ಗಳು, ಚಾಲಕರಹಿತ ವಾಹನ ಗಳು ಸೇರಿದಂತೆ ಲಕ್ಷಾಂತರ ಸಾಧನಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ಕಾರ್ಯಮಗ್ನ ವಾಗಿವೆ.