ಸಿನಿಮಾ ಸುದ್ದಿ ಹೊಸ ಸುದ್ದಿ

ನೀಲಿ ಚಿತ್ರಗಳ ಸನ್ನಿ ಜತೆ ಆಡಲು ಯಾರಿದ್ದೀರಿ..?

ಮುಂಬೈ: ಕ್ರೀಡಾಭಿಮಾನಿಯಾಗಿರುವ ನಟಿ ಸನ್ನಿ ಲಿಯೋನ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸನ್ನಿ ಲಿಯೋನ್ ಕ್ರಿಕೆಟ್ ತಂಡವೊಂದನ್ನು ಖರೀದಿಸಿದ್ದಾರೆ.
ಸನ್ನಿ ಲಿಯೋನ್ ಖರೀದಿಸಿರುವುದು ಯಾವುದೋ ಅಂತಾರಾಷ್ಟ್ರೀಯ, ಅಥವಾನ ರಾಷ್ಟ್ರೀಯ ಕ್ರಿಕೆಟ್‌ ತಂಡವಲ್ಲ. ತಾರಾ ಕ್ರಿಕೆಟ್‌ ತಂಡ.
ಕಲರ್ಸ್‌ ಟೀವಿ ವಾಹಿನಿ ಪ್ರಸಾರ ಮಾಡುವ ಬಾಕ್ಸ್‌ ಕ್ರಿಕೆಟ್‌ ಲೀಗ್‌ ಎಂಬ ತಾರಾ ರಿಯಾಲಿಟಿ ಶೋನಲ್ಲಿ ಆಡುವ ತಂಡವಾದ ಚೆನ್ನೈ ಸ್ವಾಗರ್ಸ್‌ ತಂಡವನ್ನು ಸನ್ನಿ ಖರೀದಿಸಿದ್ದಾರೆ. ಫೆ.28ರಿಂದಶುರುವಾಗುವ ಈ ರಿಯಾಲಿಟಿ ಶೋ ಹಿಂದಿನಆವೃತ್ತಿಯಲ್ಲಿ ಜನಪ್ರಿಯಗೊಂಡಿದೆ.
ಕ್ರೀಡಾಭಿಮಾನಿಯಾಗಿರುವ ಸನ್ನಿ ಲಿಯೋನ್ ಚಿಕ್ಕವಳಾಗಿರುವಾಗ ಅನೇಕ ಆಟಗಳನ್ನು ಆಡುತ್ತಿದ್ದಳಂತೆ. ನಾನು ಹೆಚ್ಚು ಕ್ರೀಡೆಗಳನ್ನು ಆಡುತ್ತಿದ್ದರಿಂದ ಇಷ್ಟು ಎತ್ತರ ಬೆಳೆಯಲು ಸಾಧ್ಯವಾಯಿತು ಎಂದು ಸನ್ನಿ ಲಿಯೋನ್ ಹೇಳಿದ್ದಾಳೆ.