ರಾಜ್ಯದೆಲ್ಲೆಡೆ ಬಿಸಿಲಿನ ತಾಪಮಾನ ದಿನೇದಿನೆ ಏರಿಕೆಯಾಗುತ್ತಿದೆ. ಸೂರ್ಯನ ಝಳ ತಾಳಲಾರದೆ ‘ಬಿಯರ್’ ಬಲ್ಲರು, “ಅಯ್ಯೋ ಒಂದೆರಡು ಚಿಲ್ಡ್ ಬಿಯರ್ ಕುಡಿದು ರಿಲ್ಯಾಕ್ಸ್ ಮಾಡ್ಕೋಳ್ಳೋಣ”ಎಂಬ ಆಲೋಚನೆಯಲ್ಲಿದ್ದರೆ,ಅಂತಹವರಿಗೆ ಕೊಂಚ ಬೇಸರವಾಗಲಿದೆ.
ಯಾಕೆಂದರೆ ಮಾರ್ಚ್ ಮೊದಲ ವಾರದಿಂದ ಬಿಯರ್ ದರ ಹೆಚ್ಚಳವಾಗಲಿದೆ. ಪ್ರತಿ ಬಾಟಲ್ ಬಿಯರ್ ಬೆಲೆ ಸರಾಸರಿ ಕನಿಷ್ಠ 3 ರೂ.ಗಳಿಂದ ಗರಿಷ್ಠ 25 ರೂ.ಗಳಷ್ಟು ಏರಿಕೆಯಾಗಲಿದೆ. ಈಗಾಗಲೇ ಹಲವು ಮದ್ಯ ತಯಾರಿಕಾ ಕಂಪನಿಗಳು ದರವನ್ನು ಪರಿಷ್ಕರಿಸಿವೆ. ಇನ್ನೂ ಕೆಲವು ಕಂಪನಿಗಳು ಪರಿಷ್ಕರಣೆಗೆ ಸಿದ್ಧತೆ ಮಾಡಿಕೊಂಡಿವೆ.
ದೇಸಿ ಕಂಪನಿಗಳಾದ ಕಿಂಗ್‌ಫಿಶರ್, ನಾಕೌಟ್ ,ಫಾಸ್ಟರ್ ಮತ್ತಿತರ ಬಿಯರ್‌ಬೆಲೆ ದೊಡ್ಡ ಬಾಟಲ್ ಕನಿಷ್ಠ 5 ರೂ. ಹೆಚ್ಚಳವಾದರೆ, ಚಿಕ್ಕ ಬಾಟಲ್ 3 ರೂ. ಹೆಚ್ಚಾಗಲಿದೆ. ಆದರೆ, ಬಹುರಾಷ್ಟ್ರೀಯ ಕಂಪನಿಗಳಾದ ಬಡ್‌ವೈಸರ್ ಮತ್ತಿತರರ ಕಂಪನಿಗಳ ಬಿಯರ್‌ಬಾಟಲ್ ಕನಿಷ್ಠ 15ರಿಂದ 25 ರೂ.ಗಳಷ್ಟು ಏರಿಕೆಯಾಗಲಿದೆ.