ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬೆಳವಣಿಗೆಯ ಜತೆಗೆ ಬದಲಾವಣೆಗಳು ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಮುಖ್ಯವಾಗಿ ಕಳೆದ ಕೆಲವು ವರ್ಷಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಶಿಕ್ಷಕಿ, ಕಾನೂನು ಮೊದಲಾದ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಈಗ ಕಲಿಕೆಯಲ್ಲೂ ವಿಭಿನ್ನತೆಯನ್ನು ಬಯಸಿದ್ದಾರೆ.
ಸಮಾಜದಲ್ಲಿ ಉನ್ನತ ಗೌರವ ಹಾಗೂ ಸಂಪಾದನೆಯನ್ನು ತಂದುಕೊಡುತ್ತಿದ್ದ ಈ ಪದವಿಗಳಿಗೂ ಪೈಪೋಟಿ ನೀಡುವಂತಹ ಕೋರ್ಸ್ಗಳು ಬಂದಿದೆ. ಇವು ನೇರವಾಗಿ ಉದ್ಯೋಗ ವಲಯಕ್ಕೆ ತಂದು ನಿಲ್ಲಿಸುತ್ತಿದೆ ಎನ್ನುವ ಮಾತು ಕೂಡ ಇದೆ. ಇಂದಿನ ಯುವಜನತೆ ಮುಖ್ಯವಾಗಿ ಹಿಂದಿನ ಕೋರ್ಸ್ಗಳಿಗಿಂತ ಹೊಸ ಕೋರ್ಸ್ಗಳನ್ನು ಕಲಿಯುತ್ತಾ ಬದುಕಿನಲ್ಲಿ ಹೊಸ ಸಾಧನೆಗಳನ್ನು ಮಾಡುವತ್ತಾ ಕನಸ್ಸು ಕಾಣುತ್ತಿದ್ದಾರೆ. ಆದರೆ ಉದ್ಯೋಗ ವಲಯದಲ್ಲಿ ಇಂತಹ ಸಾಧನೆಗಳಿಗಿಂತ ಹೆಚ್ಚಾಗಿ ತಮ್ಮ ನೆಚ್ಚಿನ ಉದ್ಯೋಗ ದೊರಕುವುದೇ ಕಷ್ಟದಾಯಕವಾಗಿರುತ್ತದೆ.
ಈ ವಿಚಾರದ ಅರಿವು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಕೊನೆಯ ಕಾಲಘಟ್ಟದಲ್ಲಿಯೇ ತಿಳಿದುಬರುವುದರಿಂದ ಆಯ್ಕೆ ಮಾಡಿದ ಕೋರ್ಸ್ಗಳೇ ಗೊಂದಲ ಮೂಡಿಸಿಹಾಕುತ್ತದೆ. ಇಂದಿನ ಪೈಪೋಟಿಯುಕ್ತ ಸಮಾಜದಲ್ಲಿ ಹೊಸ ಕೋರ್ಸ್ಗಳು ನೇರವಾಗಿ ಪೈಪೋಟಿಯುಕ್ತ ಉದ್ಯೋಗ ಮಾರುಕಟ್ಟೆಯಲ್ಲಿ ಗೆಲುವು ದಾಖಲಿಸಿಕೊಳ್ಳುವಲ್ಲಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಅವರು ಮಾಡಿಕೊಂಡು ಬರುವ ಕೋರ್ಸ್ಗಳೇ ಬಾಯಿಬಿಟ್ಟುಕೊಂಡು ಹೇಳುತ್ತಿದೆ.
ಇಲ್ಲಿ ಹೇಳಿಕೊಳ್ಳುವಂತಹ ಪೈಪೋಟಿ ಇರೋದಿಲ್ಲ. ಮುಖ್ಯವಾಗಿ ಇಂತಹ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವವರು ವಿರಳ. ಕಾರಣ ಈ ಕುರಿತು ಸರಿಯಾದ ಮಾಹಿತಿ, ಉದ್ಯೋಗ ಕ್ಷೇತ್ರದ ಅರಿವು ಇರೋದಿಲ್ಲ. ಆದರೆ ಈ ಉದ್ಯೋಗದಲ್ಲಿ ತೃಪ್ತಿ ಜತೆಗೆ ಕೈ ತುಂಬಾ ಸ್ಯಾಲರಿ ಜೇಬು ಸೇರಿಕೊಳ್ಳುತ್ತದೆ. ಅವಕಾಶಗಳು ಕೂಡ ನೀವು ಇದ್ದ ಕಡೆ ಹುಡುಕಾಡಿಕೊಂಡು ಬರುತ್ತದೆ. ಈ ಕೋರ್ಸ್ಗಳಲ್ಲಿ ಹೆಚ್ಚಿನ ಸಮಯ ಹಾಗೂ ಹಣದ ಅವಶ್ಯಕತೆನೂ ಬೀಳೋದಿಲ್ಲ. ಕೆಲವೊಂದು ಪದವಿಯನ್ನು ಮುಗಿಸಿಕೊಂಡು ಬರಲು ವಿದ್ಯಾರ್ಥಿಗಳು ಮೂರು- ನಾಲ್ಕು ವರ್ಷಗಳೇ ಕಾಯಬೇಕು. ಆದರೆ ಇಲ್ಲಿ ಪ್ಲಸ್ ಟು ಮಾಡಿದವರು ಕೂಡ ಈ ಕೋರ್ಸ್ಗಳನ್ನು ಮುಗಿಸಿಕೊಂಡು ಕೈ ತುಂಬಾ ಕಾಸು ಎಣಿಸಿಕೊಳ್ಳುವ ತಾಕತ್ತು ಇರುತ್ತದೆ. ಆದರೆ ಇಂತಹ ಕೋರ್ಸ್ಗಳನ್ನು ಮಾಡಲು ಮುಖ್ಯವಾಗಿ ಬೇಕಾಗಿರೋದು ಆಸಕ್ತಿ, ತಾಳ್ಮೆ, ದುಡಿದು ಗಳಿಸಬಲ್ಲೆ ಎನ್ನುವ ಧೈರ್ಯ ಇದ್ದಾರೆ ಸಾಕು.
ಹೊಸ ಜಮಾನ ಹೊಸ ಕೋರ್ಸ್:
ವೈನ್ ಟೇಸ್ಟರ್, ಟೀ ಟೇಸ್ಟರ್, ಚಾಕಲೇಟ್ ಟೇಸ್ಟರ್ ಇಲ್ಲಿ ಮುಖ್ಯವಾಗಿ ಕೆಲವೊಂದು ಸಂಸ್ಥೆಗಳು ಇಂತಹ ಕೋರ್ಸ್ ಮಾಡಿದವರಿಗೆ ಉದ್ಯೋಗ ನೀಡುತ್ತದೆ. ವಿಶೇಷ ತಳಿಯ ನಾಯಿ ಸಾಕಣೆ, ಫಿಟ್ನೇಸ್ ಟ್ರೈನರ್, ಡೈವಿಂಗ್ ಕಲಿಸುವ ಶಿಕ್ಷಣ, ಸೃಜನಾಶೀಲ ಬರವಣಿಗೆ, ಇವೆಂಟ್ ಮ್ಯಾನೇಜ್ಮೆಂಟ್, ವಿಡಿಯೋ ಜಾಕಿ, ರೇಡಿಯೋ ಜಾಕಿ, ಇಮೇಜ್ ಕನ್ಸಲ್ಟೆಂಟ್, ಗೇಮ್ ಡಿಸೈನರ್, ವೈಲ್ಡ್ ಲೈಫ್ ಪೋಟೋಗ್ರಾಫಿ, ಟೂರಿಸ್ಟ್ ಗೈಡ್, ಫುಡ್ ಮೇಕರ್, ಹೇರ್ ಸ್ಟೈಲೀಶ್, ಫ್ಯಾಶನ್ ಕೋರಿಯೋಗ್ರಾಫರ್ ಮೊದಲಾದವುಗಳನ್ನು ಡಿಪ್ಲೊಮಾ ಅಧಾರದಲ್ಲಿ ಶಿಕ್ಷಣ ಪಡೆದುಕೊಂಡು ಅಥವಾ ಈ ಕುರಿತು ಹೆಚ್ಚುವರಿ ಶಿಕ್ಷಣ ಪಡೆದುಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಇಂತಹ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವವರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಇಲ್ಲಿ ಶಿಕ್ಷಣದ ಜತೆಯಲ್ಲಿ ಉದ್ಯೋಗ ಕೂಡ ನಿಮ್ಮ ಕೈ ಸೇರುವಲ್ಲಿ ಯಾವುದೇ ಸಂದೇಹ ಇಲ್ಲ ಎನ್ನಬಹುದು. ಯಾಕೆ ಇನ್ನೂ ತಡ.ಇಂತಹ ಕೋರ್ಸ್ ಮಾಡಿದವರು ನೇರವಾಗಿ ಉದ್ಯೋಗ ಮಾರುಕಟ್ಟೆಗೆ ಜಿಗಿದುಬಿಡಿ.