ಎಜುಪ್ಲಸ್ ಜಾಬ್ ಜಂಕ್ಷನ್

ನಿಮ್ಮ ಕಂಪನಿಯಲ್ಲಿ ನೀವೇ ಬಾಸ್ ಆಗ್ಬಿಡಿ

ಜಗತ್ತು ಇಂದು ಸಖತ್ ಪೈಪೋಟಿಯುತವಾಗಿದೆ ಎನ್ನುವ ಮಾತನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಅದಕ್ಕೂ ಮುಖ್ಯವಾಗಿ ಒಂದು ವೃತ್ತಿ ಮಾಡುತ್ತಾ ಇರುವವರು ಬದುಕಿನಲ್ಲಿ ಸಾಕಷ್ಟು ಯಶಸ್ಸು ಪಡೆದುಕೊಳ್ಳುವುದೇ ಇಲ್ಲ ಎನ್ನುವ ಮಾತನ್ನು ಉದ್ಯೋಗ ಮಾರುಕಟ್ಟೆಯಲ್ಲಿ ದುಡಿಯುವವರು ಸದಾ ಕಾಲ ಹೇಳುತ್ತಾ ಬದುಕುತ್ತಿದ್ದಾರೆ.
ಆದರೆ ವೃತ್ತಿ ಜತೆಗೆ ಮತ್ತೊಂದು ವೃತ್ತಿ ಮಾಡಿಕೊಂಡರೆ ಕೊಂಚ ಆರ್ಥಿಕ ವಿಚಾರಗಳಲ್ಲಿ ವಿರಳತೆಯನ್ನು ಅನುಭವಿಸಬಹುದು. ಆದರೆ ಮುಖ್ಯ ವೃತ್ತಿಯನ್ನು ಮರೆಯದೇ ಪಾರ್ಟ್ ಟೈಮ್ ಆಗಿ ನಿಮಗೆ ಇಷ್ಟವಾದ ವೃತ್ತಿಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಳ್ಳುವುದು ಇಂದಿನ ಕಾಲದಲ್ಲಿ ಜಾಣ್ಮೆಯ ನಡೆಯಾಗಿದೆ. ಮುಖ್ಯವಾಗಿ ವೃತ್ತಿ ಮಾಡುತ್ತಾ ಇರುವಾಗ ಮತ್ತೊಂದು ವೃತ್ತಿಯನ್ನು ಅಪ್ಪಿಕೊಳ್ಳುವುದು ತೀರಾ ಸರಳವಾದ ಮಾತಲ್ಲ.
ಬಂಡವಾಳ, ಸಮಯ ಹಾಗೂ ತನ್ನ ಮೂಲ ವೃತ್ತಿಗೆ ಯಾವುದೇ ರೀತಿಯ ದಕ್ಕೆಯಾಗದೇ ಪ್ರವೃತ್ತಿಯಲ್ಲಿ ಇಳಿಯುವುದು ಕೊಂಚ ಕಷ್ಟವಾಗಬಹುದು. ಅದಕ್ಕೆ ಸ್ಮಾರ್ಟ್ ಬ್ಯುಸಿನೆಸ್ ಎನ್ನುವ ಕಲ್ಪನೆಯನ್ನು ಆಯ್ದುಕೊಳ್ಳಿ.

ಇದು ನಿಮಗೆ ಆರ್ಥಿಕವಾಗಿ ಬಲ ನೀಡುತ್ತದೆ. ಒಂದಲ್ಲ ಒಂದು ದಿನ ನಿಮ್ಮ ವೃತ್ತಿ ಯಾವುದೋ ಕಾರಣಕ್ಕೆ ಕೈ ಕೊಡಬಹುದು. ಆದರೆ ನೀವು ಮಾಡುತ್ತಿರುವ ಪ್ರವೃತ್ತಿ ಕೈ ಜಾರುವ ಪ್ರಮೇಯವೇ ಬರೋದಿಲ್ಲ.ಇಲ್ಲಿ ಯಾವಾಗಲೂ ನೀವು ಸೇಫ್ ಝೋನ್‌ನಲ್ಲಿ ಇರುತ್ತೀರಿ. ವ್ಯಾಪಾರದಲ್ಲೂ ಕೆಲವೊಮ್ಮೆ ಕುಸಿತವಾದರೂ ಕೂಡ ಯಾವುದೇ ಭಯವಿಲ್ಲದೇ ನೀವು ಮುಂದೆ ಸಾಗಬಹುದು. ಇಂತಹ ರಿಸ್ಕ್‌ನಲ್ಲೂ ಗೆಲ್ಲಬಲ್ಲ ಕೆಲಸಗಳು ನಿಮ್ಮ ಮುಂದಿದೆ. ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಮಾತ್ರ ನಿಮ್ಮದು.
೧.ಟ್ರಾವೆಲ್ ಏಜೆನ್ಸಿ
ನಿಜವಾಗಿಯೂ ನಿಮಗೆ ಬ್ಯುಸಿನೆಸ್ ಮಾಡುವ ಆಸಕ್ತಿಯಿದ್ದು ಕಡಿಮೆ ಬಂಡವಾಳ ಹೂಡಿಕೆಗೆ ಸಿದ್ಧರಿದ್ದರೆ ಟ್ರಾವೆಲ್ ಏಜೆನ್ಸಿಯೊಂದನ್ನು ತೆರೆಯಬಹುದು.ಭಾರತದಲ್ಲಿ ಇದೊಂದು ಉತ್ತಮ ಆದಾಯ ತಂದು ಕೊಡುವ ವೃತ್ತಿಯಾಗಿ ಗುರುತಿಸಲ್ಪಟ್ಟಿದೆ. ನೀವೇ ಅದನ್ನು ನೋಡಿಕೊಳ್ಳಬಹುದು. ಒಂದು ಸುವ್ಯವಸ್ಥಿತ ಇಂಟರ್‌ನೆಟ್ ಇದ್ದಾರೆ ಎಲ್ಲಿ ಬೇಕಾದರೂ ಟ್ರಾವೆಲ್ ಏಜೆನ್ಸಿ ತೆರೆಯಲು ಯಾವುದೇ ಅಡ್ಡಿಯಿಲ್ಲ.

೨. ಹಣಕಾಸು ಸೇವೆಗಳು
ಹಣಕಾಸು ಸೇವೆಗಳು ಅಂದರೆ ವಿಮಾ ಏಜೆನ್ಸಿ, ಫಿಕ್ಸಿಡ್ ಡಿಪಾಸಿಟ್ ಬಗ್ಗೆ ಮಾಹಿತಿ ನೀಡುವುದು, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ದಲ್ಲಾಳಿ ಪದ್ಧತಿ ಎಲ್ಲವನ್ನು ಹಣಕಾಸು ಸೇವೆಗಳು ಒಳಗೊಂಡಿರುತ್ತವೆ. ಇದಕ್ಕೂ ಸಹ ಸಣ್ಣ ಪ್ರಮಾಣದ ಬಂಡವಾಳ ಸಾಕು.

೩.ರಿಯಲ್ ಎಸ್ಟೇಟ್ ಕನ್ಸಲ್‌ಟೆನ್ಸಿ
ರಿಯಲ್ ಎಸ್ಟೇಟ್ ಬಗ್ಗೆ ನಿಮಿಗೆ ನಿಖರ ಮಾಹಿತಿ ಮತ್ತು ತಿಳಿವಳಿಕೆ ಇದ್ದರೆ ಕಡಿಮೆ ಬಂಡವಾಳದಲ್ಲಿ ರಿಯಲ್ ಎಸ್ಟೇಟ್ ಕನ್ಸಲ್‌ಟೆನ್ಸಿ ಏಜೆನ್ಸಿ ಆರಂಭಮಾಡುವುದರಲ್ಲಿ ಯಾವ ತಪ್ಪಿಲ್ಲ. ಪರ್ಸನಲ್ ಲೋನ್ ಗೆ ವಿವಿಧ ಬ್ಯಾಂಕ್ ಬಡ್ಡಿದರ ಎಷ್ಟು ಎನ್ನುವ ಅರಿವಿನ ಜತೆಯಲ್ಲಿ ವ್ಯಾಪಾರ- ವಹಿವಾಟಿನಲ್ಲಿ ಒಳ್ಳೆಯ ಜ್ಞಾನವೇ ಇದಕ್ಕೆ ಮೂಲ ಬಂಡವಾಳವಾಗಿ ತೊಡಗಿಸಿಕೊಳ್ಳಬಹುದು.

೪. ಬ್ಯೂಟಿ ಪಾರ್ಲರ್
ಇಲ್ಲಿಯೂ ಸಹ ಬಂಡವಾಳ ಹೂಡಿಕೆ ಮುನ್ನ ತಕ್ಕ ತಿಳಿವಳಿಕೆ ಇರಬೇಕು. ಯಾವ ಪ್ರದೇಶದಲ್ಲಿ ಪಾರ್ಲರ್ ಹಾಕಿದರೆ ಜನರನ್ನು ಸೆಳೆಯಬಹುದು ಎಂಬುದು ಗೊತ್ತಿರಬೇಕು. ಒಂದು ವೇಳೆ ಜಾಗವನ್ನು ಲೀಸ್ ಗೆ ತೆಗೆದುಕೊಂಡು ಪಾರ್ಲರ್ ಹಾಕುವುದಾದರೆ ಏರಿಯಾವನ್ನು ಒಂದೆರಡು ದಿನ ಪರಿಶೀಲಿಸದ ನಂತರ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ.

೫. ಮೊಬೈಲ್ ರೀಜಾರ್ಜ್ ಶಾಪ್
ಸಾಮಾನ್ಯ ಜನರಿಗೆ ಆನ್ ಲೈನ್ ರೀಜಾರ್ಜ್ ಇನ್ನು ಚಿರಪರಿಚಿತವಾಗಿಲ್ಲ. ನಗರವೊಂದರ ರಸ್ತೆಯಲ್ಲಿ ಅನೇಕ ರೀಜಾರ್ಜ್ ಮಳಿಗೆಗಳಿರುತ್ತವೆ. ಜನ ನಿಬಿಡ ಪ್ರದೇಶ ಆಯ್ಕೆ ಮಾಡಿಕೊಂಡು ಇಂಥಹ ಅಂಗಡಿ ಹಾಕಿದರೂ ಹೆಚ್ಚಿನ ಲಾಭ ಗಳಿಕೆ ಸಾಧ್ಯ.

೬. ಉದ್ಯೋಗ ಕೇಂದ್ರ
ವಿವಿಧ ಕಂಪನಿಗಳಿಗೆ ಮಾನವ ಸಂಪನ್ಮೂನ ಒದಗಿಸಿಕೊಡುವ ಕೆಲಸವನ್ನು ಆರಂಭಿಸಬಹುದು. ಇಲ್ಲಿ ಸಹ ನೀವು ಜಾಗವನ್ನು ಲೀಸ್ ಗೆ ಪಡೆದು ವೃತ್ತಿ ಕೈಗೊಳ್ಳುವುದಾದರೆ ಇನ್ನೊಮ್ಮೆ ಯೋಚಿಸಿ ಹೆಜ್ಜೆ ಇಡಬೇಕು.

೭. ಟ್ಯೂಷನ್
ಕಡಿಮೆ ಬಾಡಿಗೆಗೆ ಜಾಗವೊಂದನ್ನು ಬಾಡಿಗೆ ಪಡೆದು ನೀವು ಟ್ಯೂಷನ್ ತರಗತಿ ಆರಂಭಿಸಿದರೂ ಉತ್ತಮ ಹಣ ಗಳಿಕೆ ಸಾಧ್ಯ. ಇಲ್ಲಿ ವಿದ್ಯಾರ್ಥಿಗಳ ಲಭ್ಯತೆ ಬಗ್ಗೆ ಒಮ್ಮೆ ಯೋಚಿಸಬೇಕಾಗುತ್ತದೆ.

೮. ಇವೆಂಟ್ ಮ್ಯಾನೇಜ್ ಮೆಂಟ್
ನಿಮಗೆ ಉತ್ತಮ ಜನ ಸಂಪರ್ಕ ಇದ್ದು, ಜನರೊಂದಿಗೆ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದರೆ, ಇವೆಂಟ್ ಇವೆಂಟ್ ಮ್ಯಾನೇಜ್ ಮೆಂಟ್ ವೊಂದನ್ನು ಆರಂಭಿಸಲು ಅಡ್ಡಿ ಇಲ್ಲ. ಇದಕ್ಕೆ ಬಂಡವಾಳಕ್ಕಿಂತ ಜನರೊಂದಿಗೆ ಹೊಂದಿರುವ ಒಡನಾಟ ಮುಖ್ಯವಾಗುತ್ತದೆ.