ಜಾಬ್ ಜಂಕ್ಷನ್

ಕೆಪಿಎಸ್‌ಇಯಲ್ಲಿ ಎಂಜಿನಿಯರ್ ಉದ್ಯೋಗ

ಕರ್ನಾಟಕ ಲೋಕ ಸೇವಾ ಆಯೋಗವು ಲೋಕೋಪಯೋಗಿ, ಜಲಸಂಪನ್ಮೂಲ ಮತ್ತು
ಗ್ರಾಮೀಣಾಭಿವದಿಟಛಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳಲ್ಲಿ ಗುರುತಿಸಲ್ಪಟ್ಟ ಒಟ್ಟು 1347 ಬ್ಯಾಕ್‌ಲಾಗ್ ಎಂಜಿನಿಯರ್‌ಗಳ(846 ಸಹಾಯಕ ಎಂಜಿನಿಯರ್(ಸಿವಿಲ್/ಮೆಕ್ಯಾನಿಕಲ್) 501 ಕಿರಿಯ ಎಂಜಿನಿಯರ್ (ಸಿವಿಲ್/ಮೆಕ್ಯಾನಿಕಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೆನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಹಿಂದೆ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳಿಗೆ ವಿಶೇಷ ನಿಯಮಾವಳಿಯಡಿ ನೇಮಕ
ಮಾಡಿಕೊಳ್ಳುವ ಸರಕಾರದ ತೀರ್ಮಾನ ವಿರುದ್ಧ ಛಿಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯದ ತೀರ್ಪಿನಂತೆ ಇದೀಗ ಈ ಅಧಿಸೂಚನೆ ಹೊರಡಿಸಲಾಗಿದ್ದು, ವಯೋಮಿತಿಯನ್ನು 2001ರ ನವೆಂಬರ್ ಗೆ ಅನ್ವಯವಾಗುವಂತೆ ನಿಗದಿಗೊಳಿಸಲಾಗಿದೆ. ನ್ಯಾಯಾಲಯವು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅನ್ವಯಿಸಬೇಕಾಗಿರುವ ಜೇಷ್ಠತೆ ಹಾಗೂ ಸವಲತ್ತುಗಳ ಕುರಿತೂ ನಿರ್ದೇಶನ ನೀಡಿದೆ.
ಅರ್ಹತೆಗಳೇನು?
ವಿದ್ಯಾರ್ಹತೆ: ಸಿವಿಲ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ : ಸುಪ್ರೀಂಕೋರ್ಟ್/ಹೆಕೋರ್ಟ್ ಆದೇಶದಂತೆ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ತುಂಬದೇ ಇರುವ ಸ್ಥಾನಗಳು) (ವಿಶೇಷ ನೇಮಕಾತಿ) ನಿಯಮಗಳು 2001 ಜಾರಿಯಾದ ದಿನಾಂಕ 5 21-11-2001 ರಂದು ಇದ್ದಂತೆ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 40 ವರ್ಷ ಎಂದು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಹಂತ-1: ಕೆಪಿಎಸ್‌ಸಿ ವೆಬ್‌ಸೆಟ್ ತೆರೆದ ತಕ್ಷಣ ಪರದೆ ಮೇಲೆ ಅರ್ಜಿ
ಭರ್ತಿ ಮಾಡುವ ಮೊದಲು ಎಲ್ಲಾ ಸೂಚನೆಗಳನ್ನು ಓದಿಕೊಳ್ಳಿ.
ಹಂತ-2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು  ವೆಬ್‌ಸೆಟ್ ಒತ್ತಬೇಕು.
ಹಂತ-3: ಅಭ್ಯರ್ಥಿಗಳು ವೆಯಕ್ತಿಕ ವಿವರಗಳು ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿ ಕ್ಟೃಛಿಜಿಛಿಡಿ ಆ್ಠಠಿಠಿಟ್ಞ ಒತ್ತಿ ಮುಂದುವರೆಯಿರಿ.
ಹಂತ-4: ಅರ್ಜಿಯಲ್ಲಿ ನಮೂದಿಸಿರುವ ವಿವರಗಳನ್ನು ಪರಿಶೀಲಿಸಿ ಬದಲಾವಣೆ ಮಾಡಬೇಕಾದರೆ ಉಜಿಠಿ ಆ್ಠಠಿಠಿಟ್ಞ ಮತ್ತು ಯಾವುದೇ ಬದಲಾವಣೆ ಇಲ್ಲವಾದಲ್ಲಿ
ಮುಂದುವರೆಯುವುದು.
ಹಂತ-5: ಅಭ್ಯರ್ಥಿಯು ಸ್ಕ್ಯಾನ್ ಮಾಡಿದ ತನ್ನ ಭಾವಚಿತ್ರ / ಸಹಿಯನ್ನು ಖಿಟ್ಝಟ ಮಾಡುವ ಮುನ್ನ ಇರುವ ಸೂಚನೆಗಳನ್ನು ಓದಿ, ಅಂತಿಮವಾಗಿ ಒತ್ತುವ ಮೂಲಕ ಅರ್ಜಿ ಭರ್ತಿ ಮಾಡಿ.
ಹಂತ-6: ಭರ್ತಿ ಮಾಡಿರುವ ಆನ್‌ಲೆನ್ ಅರ್ಜಿಯ ಪ್ರತಿಯನ್ನು ಮುದ್ರಿಸಿಕೊಳ್ಳಲು ಅಂತಿಮವಾಗಿ ಒತ್ತಿ ಅರ್ಜಿಯನ್ನು ಮುದ್ರಿಸಿಕೊಳ್ಳಬೇಕು ಹಾಗೂ ಆಯೋಗವು ಅಪೇಕ್ಷಿಸಿದಾಗ ಈ ಪ್ರತಿಯನ್ನು ಹಾಜರುಪಡಿಸಬೇಕು. ಒತ್ತಿದ ನಂತರ ಅರ್ಜಿಯಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ನೇಮಕಾತಿ ಹೇಗೆ?
ಆಯಾ ಹುದ್ದೆಗಳಿಗೆ ನಿಗದಿಪಡಿಸಿದ್ದ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿದ್ದ ಒಟ್ಟು ಅಂಕಗಳ ಶೇಕಡಾವಾರನ್ನು ಆಧರಿಸಿ 18 ವರ್ಷದಿಂದ 28 ವರ್ಷ ವಯೋಮಿತಿಯುಳ್ಳ
ಅಭ್ಯರ್ಥಿಗಳ ಒಂದು ಜ್ಯೇಷ್ಠತಾ ಪಟ್ಟಿಯನ್ನು ಹಾಗೂ 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳ ಇನ್ನೊಂದು ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ ಇದರ
ಆಧಾರದಂತೆ ಆಯ್ಕೆ ಮಾಡಲಾಗುವುದು. ಆಯ್ಕೆ ಮಾಡುವಾಗ 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳ ಜ್ಯೇಷ್ಠತಾ ಪಟ್ಟಿಯಲ್ಲಿರುವವರಿಗೆ ಮೊದಲ ಆದ್ಯತೆ
ನೀಡಲಾಗುವುದು.
ಪ್ರಮುಖ ಸೂಚನೆಗಳು
ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲಿಟ್ಟು ಅದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್/ಮಾರ್ಕರ್ ಪೆನ್ನಿಂದ ಸಹಿ ಸ್ಕಾನ್ ಮಾಡಿ ಅರ್ಜಿಗೆ ಈ ಮಾಡಬೇಕು. ಭಾವಚಿತ್ರ ಹಾಗೂ ಸಹಿಯನ್ನು  ಮಾಡದ ಅರ್ಜಿಗಳು ತಿರಸ್ಕೃತಗೊಳ್ಳುತ್ತದೆ. ಸೂಚಿಸಿರುವ ಪ್ರಮಾಣ ಪತ್ರಗಳನ್ನು ನಿಗದಿತ ನಮೂನೆಯಲ್ಲಿ ಮೂಲಕ ಅರ್ಜಿ ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಪಡೆದಿಟ್ಟುಕೊಂಡಿರಬೇಕು ಹಾಗೂ ಅದೇ ಮೀಸಲಾತಿ ಪ್ರಮಾಣಪತ್ರದ / ಇತರೆ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನು ಮೂಲ ದಾಖಲಾತಿಯ ಪರಿಶೀಲನೆಗೆ ಅರ್ಹರಾದಾಗ ಆ ಸಮಯದಲ್ಲಿ ಪರಿಶೀಲನೆಗೆ
ಹಾಜರುಪಡಿಸಬೇಕು.
ಒಟ್ಟು ಹುದ್ದೆಗಳು: 1347
ಅರ್ಜಿ ಸಲ್ಲಿಸಲು ಆರಂಭ: 2016ರ ಜನವರಿ 29
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2016ರ ಫೆಬ್ರವರಿ 27
ಸಹಾಯವಾಣಿ: 080-7259270641