ಪಶುಪಾಲನಾ ಮತ್ತು ಪಶುವೆದ್ಯ ಸೇವಾ ಇಲಾಖೆಯು 2015ರ ಜುಲೆ 19ರಂದು 350 ಪಶುವೆದ್ಯಾಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದೀಗ ಈ ಹುದ್ದೆಗಳ ವರ್ಗೀಕರಣದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಿ ತಿದ್ದುಪಡಿ ಅಧಿಸೂಚನೆ
ಹೊರಡಿಸಿದೆ. 2015ರ ಜುಲೆ ಅಧಿಸೂಚನೆಯಲ್ಲಿ 205 ಮತ್ತು 100 ಬ್ಯಾಕ್ಲಾಗ್ ಸೇರಿ ಒಟ್ಟು 305 ಹುದ್ದೆಗಳಿಗೆ ಪಶುವೆದ್ಯಾಧಿ ಕಾರಿಗಳನ್ನು ನೇಮಿಸಿಕೊಳ್ಳುವ ಬಗ್ಗೆ ವಿವರಣೆ ನೀಡಲಾಗಿತ್ತು.
ಈಗಿನ ತಿದ್ದುಪಡಿ ಅಧಿಸೂಚನೆಯಲ್ಲಿ 250 ಹಾಗೂ 100 ಬ್ಯಾಕ್ ಲಾಗ್ ಹುದ್ದೆಗಳು ಸೇರಿ ಒಟ್ಟು 350 ಹುದ್ದೆಗಳಿಗೆ ನೇಮಕಾತಿ ನಡೆಸುವುದಾಗಿ ಪ್ರಕಟಿಸಲಾಗಿದೆ. ಇದರಲ್ಲಿ ಹೆದರಾಬಾದ್ ಕರ್ನಾಟಕ ವಲಯಕ್ಕೆ 76 ಹುದ್ದೆಗಳನ್ನು ಮೀಸಲಿಡಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆಗೆ 2016ರ ಫೆ.22ರೊಳಗೆ ಅಂಚೆ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.
ಒಟ್ಟು ಹುದ್ದೆಗಳು: 350
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
2016ರ ಫೆಬ್ರವರಿ 20
ಅರ್ಜಿ ಸಲ್ಲಿಸಬೇಕಾದ ವಿಳಾಸ: ಸದಸ್ಯ ಕಾರ್ಯದರ್ಶಿಗಳು,
ಇಲಾಖಾ ಆಯ್ಕೆ ಸಮಿತಿ, ಪಶುಪಾಲನಾ ಮತ್ತು ಪಶುವೆದ್ಯ
ಸೇವಾ ಇಲಾಖೆ, 2ನೇ ಮಹಡಿ, ಸರ್.ಎಂ. ವಿಶ್ವೇಶ್ವರಯ್ಯ
ಚಿಕ್ಕ ಗೋಪುರ, ಡಾ. ಬಿ.ಆರ್. ಅಂಬೇಡ್ಕರ್ ವೀದಿ,
ಬೆಂಗಳೂರು-560001
ಸಹಾಯವಾಣಿ: 080-22864441
ಪಶು ವೆದ್ಯಾಧಿಕಾರಿಗಳಿಗೆ ಅರ್ಜಿ ಆಹ್ವಾನ
