ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ನರ್ವಸ್ ಆಗಿ ಹೋಗಿದ್ದಾರೆ. ಇಡೀ ದೇಶದ ಜನರನ್ನು ತನ್ನ ಮಾತಿನ ಮೋಡಿ ಹಾಗೂ ಅಭಿವೃದ್ಧಿ ಮಂತ್ರಗಳಿಂದಾಗಿ ಹತ್ತಿರವಾಗಿದ್ದ ಮೋದಿಯನ್ನು ಕಂಗಾಲು ಮಾಡಿದವರು ಯಾರು ಅಂತಾ ಈಗ ಪ್ರಶ್ನೆ ಎದುರಾಗಿದೆ. ಅಂದಹಾಗೆ ಆರ್ಟಿಎ( ಮಾಹಿತಿ ಹಕ್ಕು)ನ ಮೂಲಕ ಪ್ರಧಾನಿ ಕಚೇರಿಗೆ ಬಂದ ಕೆಲವು ಪ್ರಶ್ನೆಗಳು ಅವರನ್ನು ನಿಜಕ್ಕೂ ದಂಗು ಬಡಿಸಿದೆ.
ಪ್ರಧಾನಿ ಕಚೇರಿಯಿಂದ ಇಂತಹ ರೋಚಕ ಮಾಹಿತಿ ಹಕ್ಕಿನ ಮೂಲಕ ಕೇಳಲಾದ ಪ್ರಶ್ನೆಗಳಲ್ಲಿ ಕೆಲವುಗಳನ್ನು ಮಾತ್ರ ಈಗ ಹೊರಗಡೆ ಬಿಡಲಾಗಿದೆ. ಅವುಗಳೇ ನೋಡುಗರನ್ನು ದಂಗು ಮೂಡಿಸಲಿದೆ. ಮಾಹಿತಿ ಹಕ್ಕಿನ ಮೂಲಕ ಕೇಳಲಾದ ಪ್ರಶ್ನೆ ಹಾಗೂ ಉತ್ತರ ಇಲ್ಲಿದೆ.
೧. ಮೇ ೨೬,೨೦೧೪ರಂದು ಪ್ರಧಾನಿ ಮಂತ್ರಿಯಾದ ನಂತರ ಎಷ್ಟು ದಿನ ರಜೆ ತೆಗೆದುಕೊಂಡಿದ್ದಾರೆ. ಇದಕ್ಕೆ ಉತ್ತರ: ಒಂದೇ ಒಂದು ದಿನ ಇಲ್ಲ
೨. ಮೋದಿ ಸೆವನ್ ರೇಸ್ ಕ್ರಾಸ್ ರಸ್ತೆಯಲ್ಲಿರುವ ಮನೆಯ ಖರ್ಚು ವೆಚ್ಚವನ್ನು ಯಾರು ಕೊಡುತ್ತಿದ್ದಾರೆ. ಅವರು ತಿಂದಿರುವ ಆಹಾರ ಹಾಗೂ ಬಳಸಿದ ಗ್ಯಾಸ್ ಕುರಿತಾದ ಮಾಹಿತಿ.
೩ ಮೋದಿಗೆ ಗುಜರಾತಿ ತಿಂಡಿ ತಿನಸು ಎಂದರೆ ಪಂಚಪ್ರಾಣ. ಅದರಲ್ಲೂ ತಮ್ಮ ನೆಚ್ಚಿನ ಅಡುಗೆಗಾರ ಬದ್ರಿ ಮೀನಾ ಕೈಯಿಂದ ಮಾಡಿದ ಗುಜರಾತಿ ಫುಡ್ ಅಚ್ಚುಮೆಚ್ಚು.
೪. ಮೋದಿ ಪ್ರಧಾನಿಯಾದ ನಂತರ ಒಂದೇ ಒಂದು ಇಫ್ತಾರ್ ಕೂಟದಲ್ಲಿ ಭಾಗವಹಿಸಿಲ್ಲ.
೫. ಮೋದಿ ಬಳಸುವ ಇಂಟರ್ನೆಟ್ ವೇಗ ಎಷ್ಟು ೩೪ಎಂಬಿಪಿಎಸ್
೬. ಮೋದಿ ೪೦೦ ಮಂದಿಯನ್ನು ತಮ್ಮ ಕಚೇರಿಯಲ್ಲಿ ಉದ್ಯೋಗಿಗಳಾಗಿ ಇಟ್ಟುಕೊಂಡಿದ್ದಾರೆ. ಅದರಲ್ಲಿ ೩೦೯ ಉದ್ಯೋಗಿಗಳು ಪ್ರಧಾನಿ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
೭. ಮೋದಿ ತಮ್ಮ ಪ್ರಧಾನಿ ಕಚೇರಿಯಲ್ಲಿ ಮೊಬೈಲ್ ಬಳಕೆ ಮಾಡೋದೇ ಇಲ್ಲ.
೮. ಮೋದಿ ತಮ್ಮ ಟ್ವಿಟ್ಟರ್ ಹಾಗೂ ಫೇಸ್ಬುಕ್ ಖಾತೆಯನ್ನು ತಾವೇ ಖುದ್ದು ನೋಡುತ್ತಿದ್ದಾರೆ. ಆದರೆ ಕಚೇರಿಯ ಸಾಮಾಜಿಕ ಜಾಲತಾಣವನ್ನು ಕಚೇರಿ ಸಿಬ್ಬಂದಿಗಳು ನೋಡುತ್ತಾರೆ.
೯. ಮೋದಿ ಸಂವಿಧಾನವನ್ನು ಓದಿ ಬಂದಿದ್ದಾರಾ.. ಅವರು ತಮ್ಮ ಕೈಯಲ್ಲಿ ಎಂದಾದರೂ ಸಂವಿಧಾನದ ಪುಸ್ತಕ ಇಟ್ಟುಕೊಂಡಿದ್ದಾರಾ..?
೧೦. ಮೋದಿ ಪದವಿ ಪೂರೈಸಿದಾಗ ಪಡೆದುಕೊಂಡ ಶೇಕಡಾ ಫಲಿತಾಂಶದ ವಿವರ.