ಸಿನಿಮಾ ಸುದ್ದಿ

ಮದುವೆ ಡೌಟು, ಮಕ್ಕಳನ್ನು ಮಾಡೋದು ಗ್ಯಾರಂಟಿ!

ಬಾಲಿವುಡ್‌ನ ಈ ಬ್ಯಾಚಲರ್‌ ಹೀರೋ ಹಲವಾರು ಸುಂದರಿಯರ ಜೊತೆ ಡೇಟಿಂಗೂ ಮೀಟಿಂಗೂ ಅಂತ ಸುತ್ತಾಡಿದ್ದಾನೆ. ಆದರೆ ಮದುವೆ ಮಾತ್ರ ಆಗಿಲ್ಲ. ಸಲ್ಲುನ ಮದುವೆ ವಿಚಾರವಾಗಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಲ್ಲು ಏನೇನೋ ಡಿಫರೆಂಟ್‌ ಆಗಿ ಉತ್ತರಿಸಿ ಸುದ್ದಿಯಾಗುತ್ತಾನೆ. .

ಈಗಲೂ ಸಲ್ಲು ತಮ್ಮ ಹೇಳಿಕೆಯಿಂದ ಹೊಸ ಸುದ್ದಿ ಮಾಡಿದ್ದಾರೆ. ‘ಮದುವೆ ಆಗೋದು ಡೌಟು, ಆದರೆ ನನಗೆ ಮೂವರು ಮಕ್ಕಳು ಬೇಕು. ಮದುವೆಯಾಗದೇ ಮೂರು ಮಕ್ಕಳನ್ನು ಸಂಭಾಳಿಸುವುದು ಕಷ್ಟ. ಆದ್ರೂ ಹೇಗೋ ನಿಭಾಯಿಸುತ್ತೇನೆ” ಎಂದಿದ್ದಾನೆ.

ಇನ್ನು ‘ಮದುವೆ ಯಾಕೆ ಆಗ್ತಿಲ್ಲ’ ಎನ್ನೋ ಪ್ರಶ್ನೆಗೆ…’ಮೊದಲು ಮದುವೆ ಆಗಲು ನನಗೇನು ವಯಸ್ಸಾಗಿದೆ ಎಂದುಕೊಳ್ಳುತ್ತಾ ಮದುವೆ ಮಾಡಿಕೊಳ್ಳಲಿಲ್ಲ. ಈಗ ‘ಮದುವೆ ವಯಸ್ಸು ಮುಗಿದು ಹೋಗಿದೆ’ ಅಂತಾ ಮದುವೆ ಆಗ್ತಿಲ್ಲ. ಆದರೆ ‘ನಾನು ಹ್ಯಾಪಿಯಾಗಿದ್ದೇನೆ ‘ ಎಂದಿದ್ದಾನೆ ಸಲ್ಲು.