ದೊಡ್ಡ ಸುದ್ದಿ ಹೊಸ ಸುದ್ದಿ

ವಾಟ್ಸ್‌ಅಪ್‌ ಮೆಸೇಜ್‌ಗಳನ್ನು ಜಿ-ಮೇಲ್‌ನಲ್ಲಿ ಸೇವ್‌

ನಿಮಗೆ ನಿಮ್ಮ ವಾಟ್ಸ್‌ಅಪ್‌ ಸಂದೇಶಗಳನ್ನು ಸೇಫ್‌ ಆಗಿ ಉಳಿಸಿಕೊಳ್ಳಬೇಕು ಎಂದಾದರೆ ಅದನ್ನು ಜಿ- ಮೇಲ್‌ನಲ್ಲಿ ಸೇವ್‌ ಮಾಡಿ ಇಡಬಹುದು. ಯಾವ ರೀತಿ ವಾಟ್ಸ್‌ಅಪ್‌ ಸಂದೇಶಗಳನ್ನು ಸೇವ್‌ ಮಾಡಿ ಇಡುವುದು ತಿಳಿಯಿರಿ.

  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೊದಲಿಗೆ ಜಿ-ಮೇಲ್‌ ಖಾತೆ ಓಪನ್‌ ಆಗಿರಬೇಕು.
  • ಈಗ ನಿಮ್ಮ ವಾಟ್ಸ್‌ಅಪ್‌ ಓಪನ್‌ ಮಾಡಿ ಯಾವುದಾದರು ಫೋಟೊ ಮೇಲ್‌ ಮಾಡಬೇಕಾದರೆ  ಫೋಟೊ ಮೇಲೆ ಪ್ರೆಸ್‌ ಮಾಡಿ. ನಂತರ ಚೂಸ್‌ ಆನ್‌ ಆಕ್ಷನ್‌ಗೆ ಹೋಗಿ ಅಲ್ಲಿಂದ ಮೇಲ್‌ ಮಾಡಬಹುದು.
  • ಇದೇ ರೀತಿ ಪೂರ್ತಿ ಚಾಟ್‌ ಬಾಕ್ಸ್‌ ಮೇಲ್‌ ಮಾಡಲು ಯಾರ ಚಾಟ್‌ ಮೇಲ್‌ ಮಾಡಬೇಕು ಅದನ್ನು ಕ್ಲಿಕ್‌ ಮಾಡಿ ಪ್ರೆಸ್‌ ಮಾಡಿ. ಆಗ ಒಂದು ಟಾಬ್‌ ಓಪನ್‌ ಆಗುತ್ತದೆ.
  • ಈ ಟ್ಯಾಬ್‌ನಲ್ಲಿ ವಿವಿಧ ಆಯ್ಕೆಗಳಿರುತ್ತವೆ. ಅದರಲ್ಲಿ ಈ ‘ಮೇಲ್‌ ಚಾಟ್‌’ ಎಂದು ಆಪ್ಷನ್‌ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
  • ಆಗ ಎಂಬ WUTHOUT MEDIAಮತ್ತು  ATTACH MEDIA ಎರಡು ಆಪ್ಷನ್‌ ಬರುತ್ತದೆ. ನಿಮಗೆ ಫೋಟೊ ಸಮೇತ ಮೇಲ್‌ ಮಾಡಬೇಕೆಂದರೆ ATTACH MEDIA ಕ್ಲಿಕ್‌ ಮಾಡಿ. ಫೋಟೊ ಬೇಡ ಎಂದಾದರೆ WUTHOUT MEDIA ಮೇಲೆ ಕ್ಲಿಕ್‌ ಮಾಡಿ.
  • ಈಗ ಫೋಟೊ ಸಮೇತವಾಗಿ ಎಲ್ಲಾ ಸಂದೇಶಗಳು ನಿಮ್ಮ ಜಿ ಮೇಲ್‌ ಮೂಲಕ ನೀವು ಸೆಂಡ್‌ ಮಾಡಬಹುದು ಅಥವಾ ಸೇವ್‌ ಮಾಡಬಹುದು.
Tags