ಕಳೆದ ೧೦ ವರ್ಷಗಳಿಂದ ಪ್ರೇಮಿಗಳ ದಿನಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದ ಹಿಂದೂಪರ ಸಂಘಟನೆಗಳಾದ ಭಜರಂಗ ದಳ ಹಾಗೂ ಇತರ ಅಡಿಯಲ್ಲಿರುವ ಯಾವುದೇ ಸಂಘಟನೆಗಳು ಈ ಬಾರಿ ಪ್ರೇಮಿಗಳ ದಿನಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಕೊಡುವ ಮಾತೇ ಇಲ್ಲವಂತೆ!
ಅರೇ ಪ್ರೇಮಿಗಳ ದಿನದಂದು ಪ್ರೇಮಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುವ ಮಂದಿಗೇನಾಯಿತು ಅಂತೀರಾ..? ಟಾಪ್ ಸಿಕ್ರೇಟ್ ಮಾತೊಂದು ರಿವೀಲ್ ಆಗಿದೆ. ಅದೇನಪ್ಪಾ ಅಂದರೆ ಪ್ರೇಮಿಗಳಿಗೆ ಯಾವುದೇ ರೀತಿಯಿಂದಲೂ ತೊಂದರೆ ಕೊಡಬಾರದು ಎನ್ನುವ ಸಂದೇಶವೊಂದು ಅವರ ಸಂಘಟನೆಯ ಮುಖ್ಯಸ್ಥರಿಂದ ರವಾನೆಯಾಗಿದೆ ಎಂದು ಆಂಗ್ಲ ಭಾಷೆಯ ಪತ್ರಿಕೆಯೊಂದು ಮಾಹಿತಿ ನೀಡಿದೆ. ಅವರನ್ನು ಹೊಡೆದು ಬಡಿಯುವುದರಿಂದ ಯಾವುದೇ ರೀತಿಯಿಂದಲೂ ಸುಧಾರಣೆ ತರಲು ಸಾಧ್ಯವಿಲ್ಲ. ಅವರನ್ನು ಬರೀ ಪ್ರಾಣಿಗಳೆಂದು ತಿಳಿದು ಬಿಡಿ ಎನ್ನುವ ಮಸೇಜ್ ಸಂಘಟನೆಯ ಮುಖ್ಯಸ್ಥರಿಂದ ಸೆಂಡ್ ಆಗಿದೆ.